ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್!

ಕೊರೊನಾ ಸಂದರ್ಭದಲ್ಲಿ ಬಿಡುವಾಗಿದ್ದ ಸ್ಟಾರ್ಸ್ ಗಳು ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಕಂಬ್ಯಾಕ್ ಆಗುತ್ತಿದ್ದಾರೆ. ತಮ್ಮ ಸಿನಿಮಾ ಶೂಟ್ ಗಳಲ್ಲಿ ಬ್ಯೂಸಿಯಾಗಿದ್ದಾರೆ. ಮಮ್ಮಿ ಖ್ಯಾತಿಯ ಲೋಹಿತ್ ನಿರ್ದೇಶನದ, ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ‘ಮಾಫಿಯಾ’ ಚಿತ್ರದ ಬಗ್ಗೆ ನಿಮಗೆ ಗೊತ್ತೇ ಇದೆ. ಇದು ಪ್ರಜ್ವಲ್ ದೇವರಾಜ್ ನಟನೆಯ 35ನೇ ಸಿನಿಮಾ. ಈಗಾಗಲೇ ಮಾಫಿಯಾ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದ್ದು, ಸಿನಿಮಾದಲ್ಲಿ ಪ್ರಜ್ವಲ್‌ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ, ಫಸ್ಟ್ ಲುಕ್ ನೋಡಿದವರು ವಾವ್ ಎಂದಿದ್ದರು.

YouTube player

ಜಂಟಲ್ ಮ್ಯಾನ್ ಇನ್ಸ್​ಪೆಕ್ಟರ್​ ವಿಕ್ರಂ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಪ್ರಜ್ವಲ್ ಅವರ ಕೈಯಲ್ಲಿ ಈಗ ಹಲವು ಚಿತ್ರಗಳಿವೆ. ಅರ್ಜುನ್​ ಗೌಡ, ವೀರಂ, ಅಬ್ಬರ, ಮಾಫಿಯಾ ಮುಂತಾದ ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅಭಿಮಾನಿಗಳಿಗಾಗಿ ಪ್ರತಿ ಸಿನಿಮಾದಲ್ಲಿಯೂ ಅವರು ಬೇರೆ ಬೇರೆ ಗೆಟಪ್​ಗಳನ್ನು ಪ್ರಯತ್ನಿಸುತ್ತಿದ್ದಾರೆ. ‘ವೀರಂ’ ಚಿತ್ರದ ಪಾತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದ ಪ್ರಜ್ವಲ್​ ದೇವರಾಜ್​ ಅವರು ‘ಮಾಫಿಯಾ’ ಚಿತ್ರಕ್ಕಾಗಿ ಮತ್ತೆ ಗೆಟಪ್​ ಬದಲಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಪ್ರಜ್ವಲ್​ ದೇವರಾಜ್​ ಅವರು ಉದ್ದ ಕೂದಲು ಬಿಟ್ಟಿದ್ದರು. ಆದರೆ ಈಗ ‘ಮಾಫಿಯಾ’ ಚಿತ್ರಕ್ಕಾಗಿ ಅವರು ಗೆಟಪ್​ ಚೇಂಜ್​ ಆಗುತ್ತಿದೆ. ಹಾಗಾಗಿ ಹೇರ್​ ಕಟ್​ ಮಾಡಿಸಿದ್ದಾರೆ. ವಿಶೇಷ ಎಂದರೆ, ತಮ್ಮ ಕೂದಲನ್ನು ಅವರು ಕ್ಯಾನ್ಸರ್​ ರೋಗಿಗಳಿಗಾಗಿ ದಾನ ಮಾಡಿದ್ದಾರೆ. ಆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.  ಕ್ಯಾನ್ಸರ್​ ರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಕೂದಲು ಉದುರುತ್ತದೆ. ಅಂತವರಿಗೆ ಸಹಾಯ ಆಗಲಿ ಎಂದು ಅನೇಕರು ಕೂದಲು ದಾನ ಮಾಡುತ್ತಾರೆ. ‘ಪೊಗರು’ ಶೂಟಿಂಗ್​ ಮುಗಿದ ಬಳಿಕ ನಟ ಧ್ರುವ ಸರ್ಜಾ ಕೂಡ ಕೂದಲು ದಾನ ಮಾಡಿದ್ದರು. ಅನೇಕ ನಟಿಯರು ಕೂದಲು ದಾನ ಮಾಡಿದ ಉದಾಹರಣೆ ಕೂಡ ಇದೆ.

ಪ್ರಜ್ವಲ್​ ದೇವರಾಜ್​ ನಟಿಸುತ್ತಿರುವ 35ನೇ ಚಿತ್ರವಾಗಿ ‘ಮಾಫಿಯಾ’ ಮೂಡಿಬರಲಿದೆ. ಡಿ.2ರಂದು ಈ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಶೂಟಿಂಗ್​ ಆರಂಭಿಸಲು ನಿರ್ದೇಶಕ ಲೋಹಿತ್​ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಡಿ.6ರಿಂದ ಚಿತ್ರೀಕರಣ ಶುರು ಆಗಲಿದೆ. ಪ್ರಜ್ವಲ್​ ದೇವರಾಜ್​ ಅವರಿಗೆ ಜೋಡಿಯಾಗಿ ಕನ್ನಡದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರು ನಟಿಸಲಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಟಗರು’, ‘ಸಲಗ’ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದು ಗಮನ ಸೆಳೆದಿರುವ ಮಾಸ್ತಿ ಅವರು ‘ಮಾಫಿಯಾ’ ಚಿತ್ರಕ್ಕೂ ಡೈಲಾಗ್​ ಬರೆಯುತ್ತಿದ್ದಾರೆ. ತರುಣ್ ಅವರು ಕ್ಯಾಮರಾ ಕೆಲಸ ನಿಭಾಯಿಸಲಿದ್ದಾರೆ. ಮುಹೂರ್ತದ ಬಳಿಕ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿದೆ.

****

Exit mobile version