ಅವಮಾನ ಮಾಡಿದವರ ಜೊತೆ ನಾನು ಹೋಗಲ್ಲಾ: ಅಜಯ್ ರಾವ್

ಲವ್ ಯೂ ರಚ್ಚು ಚಿತ್ರ ಇದೇ ಡಿಸೆಂಬರ್ 31ರಂದು ರಿಲೀಸ್ ಆಗುತ್ತಿದೆ, ಸಿನಿಮಾ ಪ್ರಚಾರ ಕೂಡ ಜೋರಾಗೆ ನಡೀತಿದೆ, ಆದರೆ ಚಿತ್ರದ ನಾಯಕ ಅಜಯ್ ರಾವ್ ಯಾವ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳದೆ, ಸಿನಿಮಾ ಪ್ರಚಾರವನ್ನು ಮಾಡದೆ ಸುಮ್ಮನಿದ್ದಾರೆ.

https://kannadapichhar.com/wp-content/uploads/2021/12/WhatsApp-Video-2021-12-21-at-14.39.13.mp4

ಟ್ರೇಲರ್ ರಿಲೀಸ್ ಸಮಯದಲ್ಲೂ ಅಜಯ್ ರಾವ್ ಕಾಣಿಸಿಕೊಳ್ಳದಿದ್ದಕ್ಕೆ ನಿರ್ಮಾಪಕರಾದ ಗುರುದೇಶಪಾಂಡೆ ಪ್ರತಿಕ್ರಿಯಿಸಿ ಅಜಯ್ ಅವರು ಯಾಕೆ ಬಂದಿಲ್ಲಾ ಎಂದು ನನಗೂ ಗೊತ್ತಿಲ್ಲಾ ಅವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಹೇಳಿದ್ದರು, ಗುರು ಅವರ ಈ ಹೇಳಿಕೆ ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಅಜಯ್ ರಾವ್ ಚಿತ್ರತಂಡದ ಜತೆಗೆ  ವೈಮನಸ್ಸು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಅಜಯ್​ ರಾವ್​ ಪ್ರತಿಕ್ರಿಯಿಸಿದ್ದು. ‘ಖಂಡಿತವಾಗಿಯೂ ನಿರ್ಮಾಪಕರ ನಡುವೆ ಮನಸ್ತಾಪ ಇದೆ. ಅವರಿಂದ ನನಗೆ ಅವಮಾನ ಆಗಿದೆ. ಅದೇನು ಎಂದು ನಾನು ಹೇಳೋಕೆ ಇಷ್ಟಪಡಲ್ಲ. ನಾನು ಚಿತ್ರತಂಡದ ಜೊತೆ ಕಾಣಿಸಿಕೊಳ್ಳಲ್ಲ. ವೈಯಕ್ತಿಕವಾಗಿ ಮಾತ್ರ ಪ್ರಚಾರ ಮಾಡ್ತಿನಿ’ ಎಂದಿದ್ದಾರೆ ಅಜಯ್.

Exit mobile version