‘ಸಲಗ’ನಿಗೆ ಸಿಕ್ತು ಸೆನ್ಸಾರ್ ಬೋರ್ಡ್ ನಿಂದ ಗ್ರೀನ್ ಸಿಗ್ನಲ್, ಇನ್ನು ಸಲಗ ನಡೆದಿದ್ದೇ ದಾರಿ..!

ಒಂದ್ ಕಡೆ ದಸರಾ ಉತ್ಸವದ ಜಂಬೂ ಸವಾರಿಗೆ ಗಜ ಪಡೆ ಅಂಬಾರಿ ಹೊತ್ತು ಮೆರವಣಿಗೆ ಹೊರಡಲು ಸಜ್ಜಾಗ್ತಿದ್ರೆ ಮತ್ತೊಂದು ಕಡೆ ಸ್ಯಾಂಡಲ್ ವುಡ್ ನ ‘ಸಲಗ’ ರಿಲೀಸ್ ಗೆ ಸಕಲ ಸಿದ್ದತೆ ನಡೆಸ್ತಿದೆ. ಈಗಾಗಲೇ ಬಿಡುಗಡೆ ಡೇಟ್ ಅನೌನ್ಸ್ ಮಾಡಿರುವ ಸಲಗ ಟೀಂಗೆ ಸೆನ್ಸಾರ್ ಬೋರ್ಡ್ ಕೂಡ ಅಸ್ತು ಎಂದಿದ್ದು ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೆಟ್ ನೀಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದೆ.

ಹೌದು ಭಾನುವಾರ (ಅ.3) ಮಲ್ಲೇಶ್ವರಂನ SRV ಥಿಯೇಟರ್ ನಲ್ಲಿ ಸಲಗ ಚಿತ್ರ ವೀಕ್ಷಿಸಿದ ಸೆನ್ಸಾರ್ ಬೋರ್ಡ್ ಯಾವುದೇ ಕಟ್ಸ್ ಇಲ್ಲದೆ ಸಲಗ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿ ಸಿನಿಮಾ ತಂಡಕ್ಕೆ ಶುಭಾಶಯ ಹೇಳಿದೆ. ಸೆನ್ಸಾರ್ ಬೋರ್ಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಸಲಗ ಚಿತ್ರ ತಂಡಕ್ಕೆ ಮತ್ತಷ್ಟು ಖುಷಿ ತಂದಿದೆ. ಅಕ್ಟೋಬರ್ 14 ರಂದು ತೆರೆಗೆ ಬರುತ್ತಿರುವ ಸಲಗ ನನ್ನು ಸ್ವಾಗತಿಸಲು ವಿಜಯ್ ಅಭಿಮಾನಿಗಳು ರಾಜಾದ್ಯಂತ ತಯಾರಿ ನಡೆಸಿದ್ದಾರೆ. ಸಲಗ ತೆರೆ ಕಾಣಲಿರುವ ಥಿಯೇಟರ್ ಗಳ ಮುಂದೆ ತಮ್ಮ ನಾಯಕ ವಿಜಯ್ ಅವರ ಬೃಹತ್ ಕಟೌಟ್ ನಿಲ್ಲಿಸಿ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ.

ಸಲಗ ತೆರೆಗೆ ಬರುವ ಮುನ್ನವೇ ಹೀಗೆ ಹೈಪ್ ಕ್ರಿಯೇಟ್ ಮಾಡುತ್ತಿದ್ದು,ಇನ್ನು ಅ.14 ಕ್ಕೆ ಮತ್ತು ನಂತರ ಯಾವ ತರಹ ಕ್ರೇಜ್ ಸೃಷ್ಟಿಸುತ್ತೋ ಕಾದುನೋಡಬೇಕಿದೆ. ಒಟ್ನಲ್ಲಿ ಈ ಹವಾ ನೋಡ್ತಿದ್ರೆ ಸಲಗ ನಡ್ದಿದ್ದೇ ದಾರಿ ಅನ್ನೋ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ.

****

Exit mobile version