ಸಲಗ ಮೀಟ್ಸ್ ಟಗರು..!

ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೂ ಮುನ್ನ ಸಲಗ ದ ಅಬ್ಬರ ಜೋರಾಗೆ ನಡೀತಿದೆ, ಸಿನಿಮಾ ರಿಲೀಸ್ ಡೇಟ್ ಹತ್ರ ಬರ್ತಿದಂಗೆ ಚಿತ್ರ ತಂಡ ಮಾಡುತ್ತಿರುವ ಪ್ರಿಪರೇಶನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸ್ತಿದೆ. ಭಾನುವಾರ (ಅ.3) ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಕ್ಕಿದ ಬೆನ್ನಲ್ಲೆ ಇಂದು (ಅ.4) ಇಡೀ ಟೀಂ ನಟ ವಿಜಯ್ ಅವರ ನೇತೃತ್ವದಲ್ಲಿ ಸ್ಟಾರ್ ರಾಜಕಾರಣಿ ಎಂದೇ ಹೆಸರಾಗಿರುವ ಹಾಲಿ ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ.

ಈ ಹಿಂದೆ ಕೆಪಿ ಶ್ರೀಕಾಂತ್ ನಿರ್ಮಾಣದ ಚಿತ್ರ ಟಗರು ಟೈಟಲ್ ಸಿದ್ದರಾಮಯ್ಯ ಅವರ ಅಭಿಮಾನಿಗಳಿಗೆ ಫುಲ್ ಥ್ರಿಲ್ ನೀಡಿತ್ತು. ಈಗ ಸಲಗ ಅ 14 ರಂದು ರಿಲೀಸ್ ಆಗುತ್ತಿದ್ದು, ಪ್ರೀ ರಿಲೀಸ್ ಶೋ (ಅ 9) ಬೆಂಗಳೂರಿನಲ್ಲಿ ನಡೆಯಲಿದೆ, ಹಾಗಾಗಿ ಇಡೀ ಚಿತ್ರ ತಂಡ ಮಾನ್ಯ ಸಿದ್ದರಾಮಯ್ಯ ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಆಮಂತ್ರಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮುಖ್ಯ ಅತಿಥಿಯಾಗಿ ಆಗಮಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರು ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಶಾಸಕರಾದ ಬೈರತಿ ಸುರೇಶ್ ಕೂಡ ಈ ವೇಳೆ ಹಾಜರಿದ್ದರು ಎಂದು ತಿಳಿದು ಬಂದಿದ್ದು. ಮೈಸೂರಿನ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ದಿನದಂದು  ಸಲಗ ಚಿತ್ರ ರಿಲೀಸ್ ಆಗುತ್ತಿದ್ದು, ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಚಿತ್ರಕ್ಕೆ ಶುಭ ಹಾರೈಸಿರುವುದು ಇಡೀ ಸಲಗ ಟೀಂಗೆ ಮತ್ತಷ್ಟು ಖುಷಿ ತಂದಿದೆ.

Exit mobile version