ಸಲಾರ್‌ ಸಿನಿಮಾದ ಆದ್ಯ ಕ್ಯಾರೆಕ್ಟರ್‌ ರಿವೀಲ್‌..!

ಕೆಜಿಎಫ್‌ ಸಿನಿಮಾ ಮೂಲಕ ಇಂಡಿಯಾ ಲೆವೆಲ್‌ನಲ್ಲಿ ಸೌಂಡ್‌ ಮಾಡ್ತಿರೋ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡ್ತಿರೋ ತೆಲುಗು ಸಿನಿಮಾ ಸಲಾರ್‌. ಸಲಾರ್‌ ಸಿನಿಮಾದ ನಾಯಕಿ ಶೃತಿ ಹಾಸನ್‌ ಹುಟ್ಟುಹಬ್ಬದ ದಿನ ಸಲಾರ್‌ನಲ್ಲಿ ಅವ್ರ ಪಾತ್ರ ಹೇಗಿರುತ್ತೆ ಅಂತ ಪರಿಚಯಿಸೋ ಕ್ಯಾರೆಕ್ಟರ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. ಆದ್ಯ ಪಾತ್ರದಲ್ಲಿ ಶೃತಿ ಹಾಸನ್‌ ಸರಳ ಸುಂದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಶಾಂತ್‌ ನೀಲ್‌ ಆವ್ರೇ ಆಕ್ಷನ್‌ ಕಟ್‌ ಹೇಳ್ತಿರೋ ಈ ಸಿನಿಮಾದ ಲೀಡ್‌ನಲ್ಲಿ ಡಾರ್ಲಿಂಗ್‌ ಪ್ರಭಾಸ್‌ ಕಾಣಿಸಿಕೊಳ್ತಾ ಇದ್ದಾರೆ.

ಕನ್ನಡದಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಆದ ಉಗ್ರಂ ಸಿನಿಮಾದ ರಿಮೇಕ್‌ ಸಲಾರ್‌ ಅಂತ ಹೇಳಲಾಗ್ತಾ ಇತ್ತು, ಈಗ ಶೃತಿ ಹಾಸನ್‌ ಗೆಟಪ್‌ ನೋಡಿದಾಗ ಮತ್ತೆ ಹಾಗನ್ನಿಸೋದ್ರಲ್ಲಿ ಅನುಮಾನವಿಲ್ಲ. ಕನ್ನಡದಲ್ಲಿ ಹರಿಪ್ರಿಯಾ ಮಾಡಿದ್ದ ಎನ್‌ ಆರ್‌ ಐ ಪಾತ್ರದಲ್ಲಿ ಶೃತಿ ಹಾಸನ್‌ ಕಾಣಿಸಿಕೊಂಡಿದ್ದಾರಾ? ಸಲಾರ್‌ ರಿಲೀಸ್‌ ಆದಮೇಲೆ ನೋಡಿ ಕನ್‌ಫರ್ಮ್‌ ಮಾಡಿಕೊಳ್ಳಬೇಕು. ಅಂದಹಾಗೆ ಈ ಸಿನಿಮಾಕ್ಕೂ ರವಿಬಸ್ರೂರ್‌ ಮ್ಯೂಸಿಕ್‌, ಭುವನ್‌ ಗೌಡ ಕ್ಯಾಮರಾ ವರ್ಕ್‌ ಇದೆ.

Exit mobile version