ಇದೇ ವರ್ಷ ಮದುವೆ ಆಗ್ತಾರಂತೆ ರಶ್ಮಿಕಾ ಮಂದಣ್ಣ !

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ಅದರ ಸಕ್ಸಸ್ ಜನ ಎಂಜಾಯ್ ಮಾಡುತ್ತಿದ್ದಾರೆ… ಸ್ಯಾಂಡಲ್ ವುಡ್ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಎಲ್ಲೆಡೆ ರಶ್ಮಿಕಾ ಹವಾ ಜೋರಾಗಿದೆ …

ಒಂದ್ ಕಡೆ ರಶ್ಮಿಕಾ ಸಿನಿಮಾಗಳು ಸುದ್ದಿಯಾದ್ರೆ ಮತ್ತೊಂದು ‌ಕಡೆ ಅವ್ರ ಪರ್ಸನಲ್ ಲೈಫ್ ಕೂಡ ಸುದ್ದಿಯಲ್ಲಿರುತ್ತೆ‌‌‌…ಅಷ್ಟೇ ಅಲ್ಲ ರಶ್ಮಿಕಾ ಕೂತರೂ ನಿಂತರೂ ಕೂಡ ಸುದ್ದಿಯಾಗ್ತಿದೆ ..ಸದ್ಯ ಈಗ ಎಲ್ಲೆಡೆ ರಶ್ಮಿಕಾ ಮದುವೆಯದ್ದೇ ಸುದ್ದಿ ..ಇತ್ತೀಚೆಗಷ್ಟೇ ಸಂದರ್ಶನದಲ್ಲಿ ನಾನು ಮದುವೆಯಾಗಲು ಇನ್ನೂ ಚಿಕ್ಕವಳು ಎದ್ದಿದ್ದ ರಶ್ಮಿಕಾ…ಈಗ ಇದೇ ವರ್ಷ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ …

ಅಷ್ಟಕ್ಕೂ ರಶ್ಮಿಕಾ ಮದುವೆಯಾಗುತ್ತಿರುವ ಹುಡುಗ ಯಾರು ಅನ್ನೋದು ಏನು ಸರ್ಪ್ರೈಸ್ ಆಗಿ ಉಳಿದಿಲ್ಲ… ಏಕೆಂದರೆ ಸಾಕಷ್ಟು ದಿನಗಳಿಂದ ರಶ್ಮಿಕಾ ಹೆಸರು ತಳಕು ಹಾಕಿಕೊಂಡಿರುವ ವಿಜಯ್ ದೇವರಕೊಂಡ ಅವ್ರ ಜೊತೆಯೇ ರಶ್ಮಿಕಾ ಇದೇ ವರ್ಷ ಸಪ್ತಪದಿ ತುಳಿಯಲಿದ್ದಾರಂತೆ …ಹೀಗೆನ್ನುವ ಗಾಸಿಪ್ ಸುದ್ದಿ ಸದ್ಯ ಇಂಡಸ್ಟ್ರಿಯ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿದೆ …

ಇನ್ನು ರಶ್ಮಿಕಾ ವಿಜಯ್ ದೇವರಕೊಂಡ ಹೆಸರು ಪದೇ ಪದೇ ಕೇಳಿ ಬರುತ್ತಿರುವುದಕ್ಕೂ ಕಾರಣ ಇದೆ… ರಶ್ಮಿಕಾ ಮುಂಬೈಗೆ ಹೋದಾಗಲೆಲ್ಲಾ ವಿಜಯ್ ದೇವರಕೊಂಡ ಜೊತೆ ವರ್ಕೌಟ್ ಮಾಡುವುದರಿಂದ ಹಿಡಿದು ಡಿನ್ನರ್, ಶಾಪಿಂಗ್ ಎಲ್ಲವೂ ಅವರ ಜತೆಯೇ ನಡೆಯುತ್ತಿದೆ ..ಇನ್ನು ಕಳೆದ ನಾಲ್ಕೈದು ತಿಂಗಳ ಹಿಂದೆ ಗೋವಾದಲ್ಲಿ ಇಬ್ಬರು ಹೊಸ ವರ್ಷ ಆಚರಣೆ ಮಾಡಿದ್ದರು ..ಹಾಗಾಗಿ ಇವರಿಬ್ಬರ ಹೆಸರು ಪದೇ ಪದೇ ತಳಕು ಹಾಕಿಕೊಳ್ಳುತ್ತಿದ್ದು ಇದೀಗ ಇವರಿಬ್ಬರು ಇದೇ ವರ್ಷ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ನ್ಯೂಸ್ ಕೇಳಿಬರುತ್ತಿದೆ

Exit mobile version