ಇಡೀ ದೇಶವೇ ಕಾಯ್ತಾ ಇದ್ದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಶೂಟಿಂಗ್ ಅಂತೂ ಮುಗಿತು.. ರಿಲೀಸಾದ ಟೀಸರ್ ಗೆ ಜನರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ತು.. ಸದ್ಯಕ್ಕಿನ್ನೂ ಸಿನ್ಮಾ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ.. ಮುಂದಿನ ಸಿನಿಮಾ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.. ಅದ್ರೂ ಕೆಜಿಎಫ್ ಶೂಟಿಂಗ್ ನಿಂದಾಗಿ ಮಿಸ್ ಮಾಡ್ಕೊಂಡು ಇದ್ದಂತಹ ಮಡದಿ ಹಾಗೂ ಮಕ್ಕಳ ಜೊತೆಗೆ ಒಂದು ಜಾಲಿ ಟ್ರಿಪ್ ಹೋಗಿದ್ದಾರೆ ರಾಕಿ ಭಾಯ್.
ಕೆಜಿಎಫ್ ಸಿನಿಮಾ ಶುರುವಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ರನ್ನು ಮದುವೆಯಾದರು, ನಂತರ ಅವರ ಮಗಳು ಆಯ್ರಾ ಯಶ್ ಹುಟ್ಟಿದ್ರು.. ನಂತರ ಅವರ ಮಗ ಯಥರ್ವ್ ಯಶ್ ಕೂಡ ಹುಟ್ಟಿದ್ರು.. ಹಾಗಾಗಿ ಯಶ್ ಅವರಿಗೆ ಕೆಜಿಎಫ್ ಅವರ ಜೀವನದ ಒಂದು ಬಹುಮಖ್ಯ ಕಾಲಘಟ್ಟ. ಶೂಟಿಂಗ್ನ ನಡುವೆಯೇ ಮದುವೆ, ಮಡದಿ ಮಕ್ಕಳು ಎಲ್ಲವನ್ನೂ ಬ್ಯಾಲೆನ್ಸ್ ಮಾಡಿದಂತಹ ರಾಕಿ ಭಾಯ್, ಈಗ ಶೂಟಿಂಗ್ ನಂತರ ಮಕ್ಕಳ ಜೊತೆ ಮಡದಿಯ ಜೊತೆ ಜಾಲಿ ಟ್ರಿಪ್ ಹೋಗಿದ್ದಾರೆ.
ಮಡದಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆಗೆ ಮಾಲ್ಡೀವ್ಸ್ ನ ಕೋನ್ರಾಡ್ ಐಲ್ಯಾಂಡ್ ಗೆ ಜಾಲಿ ಫ್ಯಾಮಿಲಿ ಟ್ರಿಪ್ ಹೋಗಿದ್ದಾರೆ ರಾಕಿ ಭಾಯ್. ಅಭಿಮಾನಿಗಳಂತೆ ರಾಕಿ ಭಾಯ್ ಕೂಡ ಕೆಜಿಎಫ್ 2 ರಿಲೀಸ್ ಬಗ್ಗೆ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹಾಗಾದ್ರೆ ಈ ಟ್ರಿಪ್ ಮುಗಿಸಿ ಬಂದ ಬಳಿಕ, ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರಾ ಕಾದು ನೋಡ್ಬೇಕು.