ನಟಿ ನಿರೂಪಕಿ ಆರ್ ಜೆ ರಚನಾ ನಿಧನ

ನಟಿ ಹಾಗೂ ನಿರೂಪಕಿ ಆಗಿ ಗುರುತಿಸಿಕೊಂಡಿದ್ದ ಆರ್ ಜೆ ರಚನಾ ನಿಧನರಾಗಿದ್ದಾರೆ… ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರಿಗೆ ಮೂವತ್ತೆಂಟು ವರ್ಷ ವಯಸ್ಸಾಗಿತ್ತು…ದಶಕಗಳಿಂದ ಆರ್ ಜೆಯಾಗಿ ಪ್ರೇಕ್ಷಕರನ್ನ ರಂಜಿಸಿದ್ದ ಅಂತಹ ರಚನಾ ಇತ್ತೀಚೆಗಷ್ಟೇ ಆರ್ ಜೆ ಕೆಲಸವನ್ನ ಬಿಟ್ಟಿದ್ದರು …

ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು… ಮಾರ್ಗಮಧ್ಯೆದಲ್ಲಿಯೇ ಎದೆ ನೋವಿನಿಂದ ರಚನಾ ಕೊನೆಯುಸಿರೆಳೆದಿದ್ದಾರೆ …

ಆರ್ ಜೆ ರಚನಾ ನಿರೂಪಕಿಯಾಗಿ ಮಾತ್ರವಲ್ಲದೆ ಸಿನಿಮಾದಲ್ಲಿಯೂ ಗುರ್ತಿಸಿಕೊಂಡಿದ್ದರು… ಸುನಿ ನಿರ್ದೇಶನ ಮಾಡಿದಂತಹ ರಕ್ಷಿತ್ ಶೆಟ್ಟಿ ಅಭಿನಯದ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರದಲ್ಲಿ ರಕ್ಷಿತ್ ಸಹೋದರಿಯಾಗಿ ಅಭಿನಯ ಮಾಡಿದ್ದರು

Exit mobile version