
ಒಂದೊAದು ಕಾಲದಲ್ಲಿ ಒಬ್ಬೊಬ್ಬರು ನಮ್ಮ ಕನ್ನಡ ಚಿತ್ರರಂಗವನ್ನ ಆಳುತ್ತಿದ್ದರು, ಅಂತಹ ಪರ್ವ ಕಾಲದಲ್ಲಿ ಒಂದು ಕಾಲ ಬಂತು ನಮ್ಮ ಕನ್ನಡ ಚಿತ್ರರಂಗವನ್ನ ಕರಾವಳಿಗರು ಆಳುವ ಕಾಲ ಅದು. ನಾಗ್ ಸಹೋದರರು ಸೇರಿದಂತೆ ಕಲ್ಪನ,ಲೀಲಾವತಿ,ಉಪೇಂದ್ರ,ಕಾಶೀನಾಥ್,ಗುರುಕಿರಣ್,ರಾಧಿಕಾ ಕುಮಾರಸ್ವಾಮಿ ಹೀಗೆ ಸಾಲು ಸಾಲು ನಟನಟಿಯರು ಒಂದೊAದು ಕಾಲದಲ್ಲಿ ತಮ್ಮ ಅಧಿಪತ್ಯ ಮೆರೆದವರು ಈಗ ಮತ್ತೆ ಆ ಯುಗ ಆರಂಭವಾಗಿದೆ ,ಅದಕ್ಕೆ ಜ್ವಲಂತ ಉದಾಹರಣೆ ಎಂದರೆ ಕರಾವಳಿಗರು ಕೊಡುತ್ತಿರೋ ಸಾಲು ಸಾಲು ಹಿಟ್ ಸಿನಿಮಾಗಳು. ಅದು ಕಿರಿಕ್ ಪಾರ್ಟಿ ಆಗಿರಬಹುದು, ಒಂದು ಮೊಟ್ಟೆಯ ಕಥೆ ಆಗಿರಬಹುದು ಅಥವಾ ಈಗ ಸದ್ದು ಮಾಡುತ್ತಿರುವ ಕಾಂತಾರ ಆಗಿರಬಹುದು,ಕರಾವಳಿಯ ತ್ರಿಬಲ್ ಆರ್‌ಗಳು ಈಗ ಸದ್ಯಕ್ಕೆ ಕನ್ನಡ ಚಿತ್ರರಂಗವನ್ನ ಆಳುತ್ತಿದ್ದಾರೆ,
ಆದರೆ ಅವರಲ್ಲಿ ಒಬ್ಬರಾದ ಪ್ಯಾಮಿಲಿ ಮ್ಯಾನ್,ಪ್ಯಾನ್ ಇಂಡಿಯಾ ಸ್ಟಾರ್ ಸಿರ್ದೇಶಕ ರಿಷಭ್ ಶೆಟ್ಟಿ ಮಾತ್ರ ತಾವು ಮುಂದೆ ಏನು ಮಾಡುತ್ತೀನಿ ಅನ್ನೋದನ್ನ ಆಗಾಗ ಅಭಿಮಾನಿಗಳಿಗೆ ಸಣ್ಣ ಹಿಂಟ್ ಕೊಡುತ್ತಾ ಇರುತ್ತಾರೆ, ಆದರೆ ಅದನ್ನ ಎಷ್ಟು ಜನ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಆದರೆ ನಿಮಗೆಲ್ಲ ರಿಷಭ್ ಶೆಟ್ಟಿಯವರ ಮದುವೆ ನೆನಪಿದ್ದರೆ ನಿಮಗೆ ಅಲ್ಲಿ ಅವತ್ತು ನೂರಾರು ಜನ ಸಲಬ್ರಿಟಿಗಳು ಕಾಣೋಕೆ ಸಿಕ್ಕರು ಆದ್ರೆ ಆ ಸಡಗರ ಸಂಭ್ರಮದ ಮಧ್ಯೆ ಅವರು ತಾವು ಮಾಡಿದ ಚಿತ್ರಗಳನ್ನ ಕಲ್ಲಂಗಡಿ ಹಣ್ಣುನಲ್ಲಿ ಕೆತ್ತಿಸಿ ಅಲಂಕಾರಿಕ ವಸ್ತುವಿನ ರೀತಿಯಲ್ಲಿ ಅಲ್ಲಿ ಜೋಡಿಸಿಟ್ಟಿದ್ದರು ಅದರಲ್ಲಿ ಅವರ ಎಲ್ಲಾ ಸಿನಿಮಾಗಳ ಚಿತ್ರ ಹಾಗು ಮುಂಬರುವ ಚಿತ್ರದ ಬಗ್ಗೆ ಸೂಕ್ಷö್ಮವಾಗಿ ಹೇಳಿದ್ದರು ಹೀಗೆ ಶೆಟರು ಸೂಕ್ಷö್ಮವಾಗಿ ಅಂದು ಕಂಬಳ ಅಂತ ಕಲ್ಲಂಗಡಿ ಹಣ್ಣಿನ ಮೇಲೆ ಕೊರೆದಿದ್ದ ಚಿತ್ರ ಯಾವುದು ಗೊತ್ತ?
ಆ ಚಿತ್ರ ಬೇರೆ ಯಾವುದು ಅಲ್ಲ ಇದೀಗ ಇಡೀ ಭಾರತ ಚಿತ್ರರಂಗವನ್ನೆ ತನ್ನೆಡೆ ಸೆಳೆದುಕೊಂಡಿರುವ ರಿಷಭ್ ಶೆಟ್ಟಿಯವರನ್ನ ನ್ಯಾಷನಲ್ ಸ್ಟಾರ್ ಮಾಡಿರೋ “ಕಾಂತಾರ”,ಈಗಾಗಲೆ ಕರಾವಳಿಯ ದೈವದ ಬಗ್ಗೆ ಮಾಡಿರೋ ಈ ಸಿನಿಮಾ ಇಡೀ ಕನ್ನಡಿಗರನ್ನ ಎದೆಯುಬ್ಬಿಸುವಂತೆ ಮಾಡಿದೆ ಯಾಕೆಂದರೆ ಕರ್ನಾಟಕ ಕಲೆಗಳ ತವರು,ಇಲ್ಲಿ ೨೦ ಕಿಲೋಮೀಟರಗೆ ಒಂದೊAದು ಕನ್ನಡ ,ಸಂಸ್ಕೃತಿ ಹೊಂದಿರುವ ನಮ್ಮ ಕನ್ನಡ ನಾಡಿನ ಪ್ರತಿ ಊರಿಗೂ ಒಂದೊAದು ಆಚರಣೆ ಇದೆ ಆದರೆ ನಾವ್ಯಾರು ಅದರ ಬಗ್ಗೆ ಜಾಸ್ತಿತಲೆಕೆಡಿಸಕೊಂಡ ಹಾಗೆ ಕಾಣೋದಿಲ್ಲ, ಆದರೆ ಇದೀಗ ಕಾಂತಾರದ ನಂತರ ನಾವೆಲ್ಲರು ನಮ್ಮ ಭಾಷೆ, ನಮ್ಮ ಆಚರಣೆಗಳ ಬಗ್ಗೆ ಹೆಚ್ಚು ಗಮನಕೊಡೋಕೆ ಶುರುಮಾಡಿದ್ದೇವೆ,ಇದೇ ನಿಟ್ಟಿನಲ್ಲಿ ಇದೀಗ ಕಾಂತಾರ-೨ ಚಿತ್ರದ ತಯಾರಿ ನಡೆದಿದೆ ಅದು ಕೂಡ ದೊಡ್ಡ ಮಟ್ಟಿನ ಯಶಸ್ಸು ಕಾಣಲಿ ಎಂದು ನಾವೆಲ್ಲ ಹಾರೈಸೋಣ.
ಅವಿನಾಶ್ ಮಲ್ನಾಡ್
ಕನ್ನಡ ಪಿಚ್ಚರ್