ʻಸಲಾರ್‌ʼ ಮುಹೂರ್ತದಲ್ಲಿ ಯಶ್‌: ಅಸಲಿ ಕಾರಣ ಇದೇನಾ?

ಹೊಂಬಾಳೆ ಫಿಲಮ್ಸ್‌ ಬ್ಯಾನರ್‌ ನಲ್ಲಿ ರೆಡಿಯಾಗ್ತಾ ಇರೋ ಭಾರತದ ಬಹುನಿರೀಕ್ಷಿತ ಸಿನಿಮಾ, ಡಾರ್ಲಿಂಗ್‌ ಪ್ರಭಾಸ್‌ ಅಭಿನಯದ, ʻಕೆಜಿಎಫ್‌ʼ ರೂವಾರಿ ಪ್ರಶಾಂತ್‌ ನೀಲ್‌ ನಿರ್ದೇಶನದ ಪಿಚ್ಚರ್‌ ʻಸಲಾರ್‌ʼ ಮುಹೂರ್ತ ಸಂಕ್ರಾಂತಿ ಹಬ್ಬವಾದ ಬೆಳಗ್ಗೆ ಸರಳವಾಗಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ಭಾಗಿ ಯಾಗಿದ್ರು, ಅಪ್ಪಟ ಕನ್ನಡದ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್‌ ರಾಷ್ಟ್ರಮಟ್ಟದಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದು, ಇದಕ್ಕೆ ಶುಭಕೋರಲು ಯಶ್‌ ಕಾರ್ಯಕ್ರಮಕ್ಕೆ ವಿಸಿಟ್‌ ಹಾಕಿದ್ರು.

ಹೊಂಬಾಳೆ ಫಿಲಮ್ಸ್‌ ಬ್ಯಾನರ್‌ನ ರಾಷ್ಟ್ರ ಮಟ್ಟದಲ್ಲಿ ಶೈನ್‌ ಆಗೋ ಹಾಗೆ ಮಾಡಿದ ನ್ಯಾಷನಲ್‌ ಸ್ಟಾರ್‌ ಯಶ್‌ ಗಿಂತ ಬೆಸ್ಟ್‌ ವಿಶೇಷ ಅತಿಥಿ ʻಸಲಾರ್‌ʼ ಮುಹೂರ್ತಕ್ಕೆ ಮತ್ತೊಬ್ಬರಿಲ್ಲ ಅನ್ನೋ ಕಾರಣಕ್ಕೆ ಯಶ್‌ರನ್ನ ಮುಹೂರ್ತಕ್ಕೆ ಆಹ್ವಾನಿಸಿದ್ರು, ನಿರ್ಮಾಪಕ ವಿಜಯ್‌ ಕಿರಗಂದೂರ್‌. ಯಶ್‌ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದ್ರು. ಇದಾದ ಬಳಿಕ ಸಾಕಷ್ಟು ಗಾಸಿಪ್‌ಗಳು ಓಡಾಡಿದ್ವು. ಆದ್ರೆ ಯಶ್‌ ಸಲಾರ್‌ ಮುಹೂರ್ತಕ್ಕೆ ಬಂದಿದ್ದು, ಗೆಸ್ಟ್‌ ಆಗಿಯೋ ಅಥವ ಸಿನಿಮಾದ ಒಂದು ಭಾಗವಾಗಿಯೋ ಅನ್ನೋ ಹೊಸ ಗಾಸಿಪ್‌ ಈಗ ಸೌಂಡ್‌ ಮಾಡ್ತಿದೆ.

ಈಗಾಗ್ಲೆ ಪ್ರಶಾಂತ್‌ ನೀಲ್‌, ಹೊಂಬಾಳೆ ಫಿಲಮ್ಸ್‌ ತಮ್ಮ ಹೊಸ ಸಿನಿಮಾಗಳನ್ನ ಈಗಾಗ್ಲೆ ಅನೌನ್ಸ್‌ ಮಾಡಿದ್ರು, ಯಶ್‌ ತಮ್ಮ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಏನನ್ನೂ ಹೇಳಿಲ್ಲ, ಹಾಗಾದ್ರೆ ಯಶ್‌ ಸಲಾರ್‌ನ ಒಂದು ಭಾಗವಾಗಿರ್ತಾರಾ, ಅಥವ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಕಿ ಭಾಯ್‌ ಕಾಣಿಸಕೊಳ್ತಾರಾ? ಇದಕ್ಕೆ ಉತ್ತರ ಸಿನಿಮಾ ಟೀಮ್‌ ನೀಡ್ಬೇಕು, ಅಲ್ಲಿವರೆಗೂ ಅಭಿಮಾನಿಗಳು ಕಾಯ್ಬೇಕು.

Exit mobile version