ನಟಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್ ಕ್ರಶ್ ಗೆ ಮಿಂಚುತ್ತಿದ್ದಾರೆ… ಸ್ಯಾಂಡಲ್ ವುಡ್ ನಲ್ಲಿ ಕೆರಿಯರ್ ಆರಂಭ ಮಾಡಿದರು ಕೂಡ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ರಶ್ಮಿಕಾ ಗೆ ಸಖತ್ ಬೇಡಿಕೆ ಇದೆ ಸೂಪರ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಳ್ಳುವ ರಶ್ಮಿಕಾ ಮುಂಬೈ. ದುಬೈ. ಹೈದ್ರಾಬಾದ್ ಅಂತ ಸುತ್ತಾಡುತ್ತಲೇ ಇದ್ದರೆ… ರಶ್ಮಿಕಾ ಈಗಾಗಲೇ ಹೈದ್ರಾಬಾದ್ ನಲ್ಲಿ ಮನೆ ಮಾಡಿ ಸೆಟಲ್ ಆಗಿ ಸಾಕಷ್ಟು ದಿನಗಳೇ ಕಳೆದಿವೆ ..

ಹೈದ್ರಾಬಾದ್ ನಲ್ಲಿ ತಮ್ಮದೇ ಆದ ಅಪಾರ್ಟ್ಮೆಂಟ್ ಹೊಂದಿದ್ದ ರಶ್ಮಿಕಾ ಈಗ ಅಲ್ಲಿ ಮನೆ ಖಾಲಿ ಮಾಡಿ ಬೇರೆ ಮನೆಯತ್ತ ಮುಖಮಾಡಿದ್ದಾರೆ… ರಶ್ಮಿಕಾ ಮನೆ ಖಾಲಿ ಮಾಡಿ ಎತ್ತ ಹೊರಟರು… ಅನ್ನೋ ಕುತೂಹಲ ಎಲ್ಲರನ್ನು ಕಾಡುತ್ತಿದೆ ..
ಸದ್ಯ ತಮ್ಮ ಮನೆಯನ್ನು ವೆಕೆಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ ಹೊಸ ಮನೆ ಖರೀದಿ ಮಾಡಿದ್ದರಾ ಅಥವಾ ಹೊಸ ಮನೆ ಬಾಡಿಗೆಗೆ ಹೋಗ್ತಿದ್ದಾರ ಅನ್ನೋದನ್ನ ಮಾತ್ರ ರಿವೀಲ್ ಮಾಡಿಲ್ಲ …
ಮನೆ ವೆಕೆಟ್ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳುವುದರ ಮೂಲಕ ಮನೆ ಶಿಫ್ಟ್ ಮಾಡುವುದು ಎಷ್ಟು ಕಷ್ಟ ಅನ್ನೋದನ್ನ ಬರೆದುಕೊಂಡಿದ್ದಾರೆ…