ಪುಷ್ಪಾ ದ ಶ್ರೀವಲ್ಲಿ ಫುಲ್ ‘ರಾ’: ರಶ್ಮಿಕಾ ಮಂದಣ್ಣ

ದಕ್ಷಿಣ ಭಾರತದಲ್ಲಿ ಅಲ್ಲದೆ ಬಾಲಿವುಡ್ ನಲ್ಲು ತುಂಬಾ ಬ್ಯೂಸಿ ಇರುವ ನಟಿ ರಶ್ಮಿಕಾ ಮಂದಣ್ಣ, ಸದ್ಯ ಇಡೀ ಭಾರತದಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿರುವ ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಹಳ್ಳಿ ಹುಡುಗಿ ಶ್ರೀವಲ್ಲಿ ಪಾತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಇದೇ ಡಿಸೆಂಬರ್ 17 ರಂದು ಇಡೀ ದೇಶಾದ್ಯಂತ ರಿಲೀಸ್ ಆಗುತ್ತಿದೆ ಪುಷ್ಪಾ ಚಿತ್ರ.

YouTube player

ಚಿತ್ರರಂಗಕ್ಕೆ ರಶ್ಮಿಕಾ ಮಂದಣ್ಣ ಕಾಲಿಟ್ಟು 5 ವರ್ಷಗಳಾಯ್ತು. ಇಷ್ಟು ಕಡಿಮೆ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ, ಪುನೀತ್ ರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ, ಅಲ್ಲು ಅರ್ಜುನ್, ಮಹೇಶ್ ಬಾಬು, ವಿಜಯ್ ದೇವರಕೊಂಡ ಜೊತೆ ನಟಿಸುವ ಅವಕಾಶ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಅಮಿತಾಭ್ ಬಚ್ಚನ್ ಜೊತೆ ಕೂಡ ತೆರೆ ಹಂಚಿಕೊಳ್ಳುವ ಅವಕಾಶ ಗಳಿಸಿದರು.

ನಾನು ಹಿಂದೆ ಹಳ್ಳಿ ಹುಡುಗಿಯ ಕ್ಯಾರೆಕ್ಟರ್‌ ಮಾಡಿದ್ದೇನೆ. ಆದರೆ, ಈ ಸಿನಿಮಾದಲ್ಲಿ ಕೊಂಚ ರಾ ಕ್ಯಾರೆಕ್ಟರ್‌ ಇತ್ತು. ಮೇಕಪ್‌, ಹೇರ್‌ಸ್ಟೈಲ್‌, ಮಾತನಾಡುವ ರೀತಿ, ಬಾಡಿ ಬಿಹೇವಿಯರ್‌ ಎಲ್ಲವೂ ವಿಭಿನ್ನವಾಗಿದ್ದವು. ರಶ್ಮಿಕಾನ ಮೊದಲಿನಿಂದಲೂ ನೋಡಿಕೊಂಡು ಬಂದವರು ಶ್ರೀವಲ್ಲಿ ಪಾತ್ರ ಇವರೇ ಮಾಡಿದ್ದ ಎನ್ನುವಷ್ಟರ ಮಟ್ಟಿಗಿನ ಬದಲಾವಣೆ ಈ ಪಾತ್ರದಲ್ಲಿ ಕಾಣುತ್ತದೆ. ಈ ಪಾತ್ರವನ್ನು ನನಗೆ ನೀಡಿದ್ದಕ್ಕೆ ನಾನು ನಿರ್ದೇಶಕ ಸುಕುಮಾರ್‌ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಎಂದಿದ್ದಾರೆ

ಸುಕುಮಾರ್‌ ಅವರು ಮೊದಲು ಸ್ಕ್ರಿಪ್ಟ್‌ ಹೇಳಿದಾಗ, ಈ ಭಾಷೆ ಹೇಗೆ ಕಲಿಯುವುದು ಎಂದೆನಿಸಿತ್ತು. ಪೂರ್ತಿ ಕಲಿಯಲು ಕಷ್ಟವಾಗುತ್ತದೆ ಎನಿಸಿತು. ಸಿನಿಮಾದ ಸ್ಕ್ರಿಪ್ಟ್‌ಗೆ ಎಷ್ಟು ಬೇಕೊ ಅಷ್ಟನ್ನು ಮಾಡಿದೆ. ಮೇಕಪ್‌, ಹೇರ್‌ಸ್ಟೈಲ್‌ ಹೀಗೆ ಹಲವು ವಿಚಾರಗಳಲ್ಲಿ ಎರಡ್ಮೂರು ಬಾರಿ ಲುಕ್‌ ಟೆಸ್ಟ್‌ ಮಾಡಿದರು. ಕಲರ್‌ ಟೋನ್‌, ಕಣ್ಣಿನ ಬಣ್ಣ ಹೀಗೆ ಬಹಳಷ್ಟು ವಿಚಾರಗಳಲ್ಲಿ ನಿರ್ದಿಷ್ಟವಾದ ತಯಾರಿ ನಡೆಸಿಕೊಂಡೆವು.

ಅವರು ಕೆಲಸದ ವಿಚಾರದಲ್ಲಿ ರಾಕ್ಷಸ ಎನ್ನಬಹುದು. ಸುಕುಮಾರ್‌ ಪರ್ಫೆಕ್ಷನಿಸ್ಟ್‌. ಪಾತ್ರಕ್ಕೆ ಬೇಕಾದಂತೆ ಕಲಾವಿದರನ್ನು ರೆಡಿ ಮಾಡಿಕೊಳ್ಳುತ್ತಾರೆ. ಕಥೆ ಹೇಳುತ್ತಲೇ ನಮ್ಮನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಸ್ವಲ್ಪ ಕಷ್ಟ. ಆದರೆ, ಕೆಲಸ ಏನು ಎಂದು ತಿಳಿದುಕೊಂಡರೆ, ಬಹಳ ಸುಲಭವಾಗುತ್ತದೆ. ಎಂದರು

****

Exit mobile version