ರಶ್ಮಿಕಾ ಮಂದಣ್ಣಗೆ ಪ್ಯಾರಿಸ್‌ನಲ್ಲಿ ಲವ್ವಾಗೋಯ್ತು..!

ಕನ್ನಡದಿಂದ ತೆಲುಗು ತಮಿಳಿಗೆ ಹಾರಿದ ಕನ್ನಡ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ತೆಲುಗು ತಮಿಳಿನಲ್ಲೇ ಸಿಕ್ಕಾಪಟ್ಟೆ ಬ್ಯುಸಿ. ರಶ್ಮಿಕಾ ಅಭಿನಯದ ದೊಡ್‌ ದೊಡ್‌ ಸಿನಿಮಾಗಳು ಬ್ಯಾಕ್‌ ಟು ಬ್ಯಾಕ್‌ ರಿಲೀಸ್‌ ಆಗ್ತಾ ಇದ್ದು. ರಶ್ಮಿಕಾಗೆ ಪುರುಸೊತ್ತೇ ಸಿಗ್ತಾ ಇಲ್ಲ, ಈ ನಡುವೆಯೂ ಕಳೆದ ತಿಂಗಳು ನವಂಬರ್‌ ೨೪ ರಿಂದ ೪ ದಿನಗಳ ಕಾಲ ರೊಮ್ಯಾಂಟಿಕ್‌ ಸಿಟಿ ಪ್ಯಾರೀಸ್‌ಗೆ ಒಬ್ಬರೇ ಹೋಗಿ ಸುತ್ತಾಡಿಕೊಂಡು ಬಂದಿದ್ದಾರೆ.

ಮುಂದಿನ ವಾರ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿರೋ ಪುಷ್ಪ ಸಿನಿಮಾದ ಪ್ರಮೋಷನ್‌ ಕೆಲಸದಲ್ಲಿ ಬ್ಯುಸಿಯಾಗೋಕು ಮೊದಲು ರಿಲ್ಯಾಕ್ಸ್‌ ಮಾಡುವ ಸಲುವಾಗಿ ಪ್ಯಾರಿಸ್‌ ಟೂರ್‌ ಮಾಡಿಕೊಂಡು ಬಂದಿದ್ದಾರೆ ರಶ್ಮಿಕಾ ಮಂದಣ್ಣ..! ಈಗಾಗ್ಲೆ ಸಿನಿಮಾದ ಹಾಡುಗಳು ಪಾಪ್ಯುಲರ್‌ ಆಗಿದ್ದು, ಅಭಿಮಾನಿಗಳು ರಶ್ಮಿಕಾರ ಹೊಸ ಹಳ್ಳಿ ಲುಕ್‌ ನೋಡೋಕೆ ಕಾತುರರಾಗಿದ್ದಾರೆ.

Exit mobile version