ಇಲ್ಲಿ ಎಂಗೇಜು, ಆಂಧ್ರಾಲಿ ಡ್ಯಾಮೇಜು, ತಮಿಳು ಮ್ಯಾರೇಜು..ಮುಂದೆ..!

ಕನ್ನಡದ ಹುಡುಗಿ, ಕಿರಿಕ್‌ ಮಾಡಿಕೊಳ್ದೆ ಕಿರಿಕ್‌ ಪಾರ್ಟಿ ಆದ್ಮೇಲೆ ಕನ್ನಡಕ್ಕಿಂತ ಹೆಚ್ಚ್ಗಿ ಪರಭಾಷೆಗಳಲ್ಲಿ ಬ್ಯೂಸಿಯಾಗಿರೋ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಇತ್ತೀಚೆಗೆ ಲೈವ್‌ ಒಂದ್ರಲ್ಲಿ, ತಾನು ತಮಿಳುನಾಡಿನ ಸೊಸೆಯಾಗೋದಕ್ಕೆ ಇಷ್ಟ ಪಡ್ತೀನಿ ಅಂದಿದ್ರು, ಈ ಮ್ಯಾಟರ್ರು ಈಗ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ, ಲಾಕ್‌ ಡೌನ್‌ ಆಗಿ, ಕೆಲಸ ಮಾಡ್ಕೊಂಡಿದ್ದೋರಿಗೂ ಕೆಲ್ಸ ಇಲ್ಲದಂಗಾಗಿ ರಶ್ಮಿಕಾ ಸೊಸೆ ಟಾಪಿಕ್‌ ಟ್ರೆಂಡಿಂಗ್‌ ಆಗಿದೆ.

ಕನ್ನಡದಲ್ಲಿ ಕಿರಿಕ್‌ ಪಾರ್ಟಿ ಸಿನಿಮಾ ಮಾಡುವಾಗ್ಲೆ ಸಿಂಪಲ್‌ ಸ್ಟಾರ್‌ ಮೇಲೆ ಸಿಕ್ಕಾಪಟ್ಟೆ ಲವ್ವಾಗಿ, ಎಂಗೇಜ್‌ಮೆಂಟ್‌ ಕೂಡ ಆಗೊಗಿತ್ತು. ಇನ್ನೇನು ರಶ್ಮಿಕಾ ಮಂದಣ್ಣ ರಕ್ಷಿತ್‌ ಶೆಟ್ಟಿ ಮನೆ ಸೇರ್ತಾರೆ ಅಂದುಕೊಂಡಿದ್ರು. ಕರ್ನಾಟಕದ ಹುಡುಗಿ ಕನ್ನಡದ ಮನೆಯ ಸೊಸೆಯಾಗ್ತಾಳೆ ಅಂದುಕೊಂಡಿದ್ದ ಅಭಿಮಾನಿಗಳ ಕನಸು, ಟಪ್‌ ಅಂತ ಬದಲಾಯ್ತು. ಬ್ರೇಕ್‌ ಅಪ್‌ ಆಯ್ತು. ಮದುವೆ ಮ್ಯಾಟರು ಸೈಲೆಂಟಾಯ್ತು.

ಅಲ್ಲಿಂದ ತೆಲುಗು ಸಿನಿಮಾ ಇಂಡಸ್ಟ್ರಿನಲ್ಲಿ ಒಂದೆರಡು ಸಿನಿಮಾದಿಂದಲೇ ಪಾಪ್ಯುಲರ್‌ ಆಗಿ ಹೋದ ರಶ್ಮಿಕಾ ಮಂದಣ್ಣ, ತೆಲುಗು ಚಿತ್ರಪ್ರೇಮಿಗಳ ಹಾರ್ಟ್‌ಲಿ, ಇನ್ಕೇಮ್‌ ಕಾವಾಲಿ ಅಂತ ಮನೆ ಮಾಡ್ಕೊಂಡ್ರು, ಸಾಲದಕ್ಕೆ ಅಪ್ಪಟ ತೆಲುಗು ಹುಡುಗ ವಿಜಯ್‌ ದೇವರಕೊಂಡ ಜೊತೆ ಕುಚ್‌ ಕುಚ್‌ ಅಂದ ಗಾಸಿಪ್‌ ಬಗ್ಗೆ ತುಟಿಕ್‌ ಪಿಟಿಕ್‌ ಅನ್ನದೇ ಇವತ್ತಿಗೂ ಆಂಧ್ರ ಸೊಸೆಯಾಗೋ ಆಪ್ಶನ್‌ ಉಳಿಸಿಕೊಂಡಿದ್ದಾರೆ..

ಈಗ ತಮಿಳು ಸಿನಿಮಾ ಮಾಡ್ತಿರೋ ರಶ್ಮಿಕಾ ಮಂದಣ್ಣ ತಮ್ಮ ಮತ್ತೊಂದು ಆಸೆ ಹೇಳಿಕೊಂಡಿದ್ದಾರೆ, ತಮಗೆ ತಮಿಳು ಸಂಸ್ಕೃತಿ ಸಂಪ್ರದಾಯಗಳು ಸಿಕ್ಕಾಪಟ್ಟೆ ಲೈಕ್‌ ಆಗಿದ್ದು, ತಮಿಳು ಸಂಪ್ರದಾಯದ ಮನೆಗೆ ಸೊಸೆಯಾಗ್ತಿನಿ ಅಂದಿದ್ದಾರೆ. ಅದೇನು ಆಪ್ಶನ್‌ ಇಟ್ಕೊಂಡೇ ಹೇಳಿದ್ದಾರೋ, ಅಥವ ಸುಮ್ನೆ ಹಂಗೆ ಇರ್ಲಿ ಅಂತ ಹೇಳಿದ್ದಾರೋ ಗೊತ್ತಿಲ್ಲ, ಆದ್ರೆ ಸದ್ಯ ಬಾಲಿವುಡ್‌ ಅಂಗಳದಲ್ಲಿರೋ ರಶ್ಮಿಕಾ ಮದುವೆ ಗಾಸಿಪ್‌ಗೆ ಹೆಂಗ್‌ ಮಂಗಳ ಆಡ್ತಾರೋ ಅಂತ ಅಭಿಮಾನಿಗಳು, ಟ್ರೋಲ್‌ ಫಂಟರ್ಸ್‌ ಕಾಯ್ತಾ ಇದ್ದಾರೆ.

Exit mobile version