ಸಮಂತಾ ಮೇಲೆ ಉರ್ಕೊಂಡಿದ್ದಾರಾ ರಶ್ಮಿಕಾ ಮಂದಣ್ಣ..!

ಈ ವಾರ ರಿಲೀಸ್‌ ಆಗ್ತಾ ಇರೋ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ ಸಿನಿಮಾದ ಹೀರೋಯಿನ್‌ ರಶ್ಮಿಕಾ ಮಂದಣ್ಣ. ತಲುಗು,ತಮಿಳು, ಕನ್ನಡ, ಸೇರಿದಂಥೆ ಒಟ್ಟು 5 ಭಾಷೆಗಳಲ್ಲಿ ರಿಲೀಸ್‌ ಆಗ್ತಾ ಇರೋ ಪ್ಯಾನ್‌ ಇಂಡಿಯಾ ಪಿಚ್ಚರ್‌ ಪುಷ್ಪ ಸಿನಿಮಾ ಹೀರೋಯಿನ್‌ ರಶ್ಮಿಕಾ. ಸಿನಿಮಾದ ಮೊದಲ ಪೋಸ್ಟರ್‌ ಬಂದಾಗಿನಿಂದಲೂ ರಶ್ಮಿಕಾ ಫುಲ್‌ ಹೈಪ್‌ ನಲ್ಲೇ ಇದ್ರು, ರಶ್ಮಿಕಾ ಫಸ್ಟ್‌ ಲುಕ್‌ ರಿಲೀಸ್‌ ಆದಾಗ ಶ್ರೀವಲ್ಲಿ ಸಾಂಗ್‌ ಬಂದಾಗ ಸಾಮಿ ಸಾಮಿ ಸಾಂಗ್‌ ಬಂದಾಗ್ಲೆಲ್ಲಾ ರಶ್ಮಿಕಾಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಹೈಪ್‌ ಸಿಕ್ಕಿತ್ತು.

ರಶ್ಮಿಕಾಗೆ ಸಿಕ್ಕ ಈ ಇಮೇಜ್‌ ಸಮಂತ ಅಭಿನಯಿಸಿರೋ ಐಟಂ ಸಾಂಗ್‌ ಊ ಅಂಟಾವಾ. ಬರ್ತಾ ಇದ್ದಂತೆ ಓವರ್‌ ಶ್ಯಾಡೋ ಆಗಿ ಹೋಯ್ತು. ಬಿಟ್ಟಿರೋದು ಒಂದು ಬರೀ ಲಿರಿಕಲ್‌ ಸಾಂಗ್‌ ಹಾಗೂ 20 ಸೆಕೆಂಡ್‌ ನ ಟೀಸರ್‌ ಆದ್ರೂ ತಿಂಗಳುಗಳಿಂದ ಪುಷ್ಪ ಸಿನಿಮಾದ ಹೆಸರಲ್ಲಿ ಪಾಪ್ಯುಲಾರಿಟಿ ಗಿಟ್ಟಿಸಿಕೊಂಡಿದ್ದ ರಶ್ಮಿಕಾ ಪಾಪ್ಯುಲಾರಿಟಿನ ತಿಂದೇ ಹಾಕಿ ಬಿಡ್ತು. ಪಿಚ್ಚರ್‌ ಹೀರೋಯಿನ್‌ ರಶ್ಮಿಕಾ ಆದ್ರೂ, ಸಮಂತ ಫಸ್ಟ್‌ ಟೈಮ್‌ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ತಾ ಇರೋ ಕಾರಣಕ್ಕೆ, ಒಂದೇ ದಿನಕ್ಕೆ ನೇಷನ್‌ ವೈಡ್‌ ಪಾಪ್ಯುಲರ್‌ ಆದ ದೇವಿ ಶ್ರೀ ಪ್ರಸಾದ್‌ ಟ್ಯೂನ್‌ ಇಂದಾಗಿ ಶ್ರೀವಲ್ಲಿಗೆ ಮಂಕು ಬಡಿದು ಬಿಡ್ತು.

ಇದೇ ಕಾರಣಕ್ಕೆಈಗ ರಶ್ಮಿಕಾ ಲೈಟಾಗಿ ಮುಸಿ ಮುಸಿ ಆಗಿರೋ ಹಾಗಿದೆ. ಮೊನ್ನೆ ನಡೆದ ಪ್ರೀರಿಲೀಸ್‌ ಈವೆಂಟ್‌ನಲ್ಲಿ ಹಾಕಿದ್ದ ಸಾಮಿ ಸಾಮಿ ಹಾಡಿನ ಸಿಗ್ನೇಚರ್‌ ಸ್ಟೆಪ್‌ನ ಈಗ ಸೋಷಿಯಲ್‌ ಮೀಡಿಯಾದಲ್ಲೂ ಹಾಕಿ ಪೋಸ್ಟ್‌ ಮಾಡಿದ್ದಾರೆ. ಆದ್ರೂ ಸಮಂತಾ ಹಾಡಿನ ಮುಂದೆ ರಶ್ಮಿಕಾ ಮಂಕಾಗಿ ಕಾಣ್ತಿರೋದು ನಿಜ. ಆದ್ರೆ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಹೇಗಿರುತ್ತೆಅನ್ನೋದು ಈಗ ಎಲ್ಲರಲ್ಲೂ ಇರೋ ಕುತೂಹಲ, ಅಲ್ಲು ಅರ್ಜುನ್‌ ಕೂಡ ರಶ್ಮಿಕಾರನ್ನ ಹೊಗಳಿರೋದ್ರಿಂದ, ಸಿನಿಮಾದಲ್ಲಿ ರಶ್ಮಿಕಾ ನೋಡುಗನ ಮನ ಗೆಲ್ಲಲ್ಲಿದ್ದಾರೆ.

****

Exit mobile version