ಮದುವೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ರಶ್ಮಿಕಾ
ರಶ್ಮಿಕಾ ಮಂದಣ್ಣ…ಸದ್ಯ ಟಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಹೆಸರು…ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್ ಬಿಡುಗಡೆಯಾದ ನಂತರ ರಶ್ಮಿಕಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ…ಸಿನಿಮಾ ಕೆಲಸದ ಹೊರತಾಗಿ, ರಶ್ಮಿಕಾ ಅವರ ವೈಯಕ್ತಿಕ ಜೀವನವೂ ಆಗಾಗ ಸುದ್ದಿ ಆಗುತ್ತಲೇ ಇರುತ್ತೆ….

ಈ ಹಿಂದೆ ರಶ್ಮಿಕಾ ಮತ್ತು ಅರ್ಜುನ್ ರೆಡ್ಡಿ ನಟ ವಿಜಯ್ ದೇವರಕೊಂಡ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಗಾಸಿಪ್ ಹರಡಿತ್ತು…ಆದರೆ ಇಬ್ಬರು ಸ್ಟಾರ್ ಗಳು ಈ ಮಾತನ್ನ ತಳ್ಳಿ ಹಾಕಿ ನಾವಿಬ್ಬರು ಸ್ನೇಹಿತರಷ್ಟೇ ಎಂದಿದ್ದರು…

ಆದರೆ ಇತ್ತೀಚಿನ ಸಂದರ್ಶನ ಒಂದರಲ್ಲಿ ರಶ್ಮಿಕಾ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಹಾಗೂ ತಾನು ಯಾವ ರೀತಿಯ ವ್ಯಕ್ತಿಯನ್ನು ಮದುವೆಯಾಗುತ್ತೇನೆ. ಎಂದು ಮನಬಿಚ್ಚಿ ಮಾತನಾಡಿದ್ದಾರೆ….

“ನನಗೆ, ಪ್ರೀತಿ ಎಂದರೆ ಒಬ್ಬರಿಗೊಬ್ಬರು ಗೌರವ, ಸಮಯ ಮತ್ತು ನೀವು ಸುರಕ್ಷಿತವಾಗಿರಿದಾಗ ಪ್ರೀತಿ. ಪ್ರೀತಿಯನ್ನು ವಿವರಿಸಲು ಕಷ್ಟವಾಗುತ್ತದೆ ಏಕೆಂದರೆ ಅದು ಭಾವನೆಗಳಿಗೆ ಸಂಬಂಧಿಸಿದೆ. ಪ್ರೀತಿಯು ಎರಡು ಕಡೆಯಿಂದ ಆಗಬೇಕು ಕೇವಲ ಒಂದು ಕಡೆಯಿಂದಲ್ಲ…

ಇನ್ಮು ಮದುವೆಯ ಬಗ್ಗೆ ಮಾತನಾಡಿದ ರಶ್ಮಿಕಾ “ನನಗೆ ಅದರ ಬಗ್ಗೆ ಏನು ಯೋಚಿಸಬೇಕೆಂದು ತಿಳಿದಿಲ್ಲ, ಏಕೆಂದರೆ ನಾನು ತುಂಬಾ ಚಿಕ್ಕವಳು..ಹಾಗಾಗಿ ಅದರ ಬಗ್ಗೆ ಯೋಚಿಸಲಿಲ್ಲ ಎಂದಿದ್ದಾರೆ ಈ ಮೂಲಕ ಸದ್ಯಕ್ಕೆ ಮದುವೆ ಮಾತಿನ್ನ ಅನ್ನೋದನ್ನ ನೇರವಾಗಿ ಹೇಳಿದ್ದಾರೆ

ರಶ್ಮಿಕಾ ಮಂದಣ್ಣ ಸದ್ಯ ಎರಡು ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಒಂದು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಮತ್ತೊಂದು ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್ಬೈನಲ್ಲಿ ಕೆಲಸ ಮಾಡುತ್ತಿದ್ದಾರೆ….