ರಮ್ಯ ಮೊದಲ ಸಿನಿಮಾಕ್ಕೆ ಸಂಕಷ್ಟ, ರಾಜೇಂದ್ರ ಸಿಂಗ್‌ ಬಾಬು ನೋಟೀಸ್‌..!

ಮೋಹಕ ತಾರೆ ರಮ್ಯಾ ನಿರ್ಮಾಣದ “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾಕ್ಕೆ ಈಗ ಸಂಕಷ್ಟ ಎದುರಾಗಿದೆ. ತಮ್ಮ ಹೋಮ್‌ ಬ್ಯಾನರ್‌ ಆಪಲ್‌ಬಾಕ್ಸ್‌ ಸ್ಟುಡಿಯೋಸ್‌ ನಿರ್ಮಾಣದಲ್ಲಿ, ರಾಜ್‌ ಬಿ ಶೆಟ್ಟಿ ನಿರ್ದೇಶನದ ಸಿನಿಮಾಕ್ಕೆ ಈಗ ನೋಟೀಸ್‌ ಜಾರಿಯಾಗಿದೆ.ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ನೋಟಿಸ್ ನೀಡಿದ್ದಾರೆ.

ರಾಜೇಂದ್ರ ಸಿಂಗ್‌ ಬಾಬು ತಮ್ಮ ವಕೀಲ ವಕೀಲ ಎಸ್ ಆರ್ ಶ್ರೀನಿವಾಸ್ ಮೂರ್ತಿ ಮೂಲಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಿಗೆ ನೋಟಿಸ್ ತಲುಪಿಸಿದ್ದಾರೆ. ನೋಟೀಸ್ ನಲ್ಲಿ ʻಸ್ವಾತಿ ಮುತ್ತಿನ ಮಳೆ ಹನಿಯೇ…ʼ ಸಿನಿಮಾ ಟೈಟಲ್ ಅನ್ನು ಯಾರಿಗೂ ಸಹ ನೀಡಬಾರದು ಎಂದು ತಾಕೀತು ಮಾಡಿದ್ದಾರೆ.

ರಮ್ಯಾ ಸಿನಿಮಾ ವಿರುದ್ದ ನೀಡಿರೋ ಈ ನೋಟೀಸ್‌ ನಲ್ಲಿ, ರಮ್ಯಾ ಸಿನಿಮಾಕ್ಕೆ ಸ್ವಾತಿ ಮುತ್ತಿನ ಮಳೆಹನಿಯೇ ಟೈಟಲ್‌ ನೀಡಿದ್ರೆ ಕೃತಿ ಚೌರ್ಯವಾಗುತ್ತೆ ಎಂದು ಉಲ್ಲೇಖಿಸಲಾಗಿದೆ. ಆದರೆ ರಾಜೇಂದ್ರ ಸಿಂಗ್‌ ಬಾಬು ಅವ್ರು ಈ ಟೈಟಲ್‌ ಅನ್ನು ಫಿಲಂಚೇಂಬರ್‌ನಲ್ಲಿ ರಿಜಿಸ್ಟರ್‌ ಮಾಡಿಸಿಲ್ಲ, ಹಾಗಾಗಿ ಈ ನೋಟೀಸ್‌ ಎಷ್ಟರ ಮಟ್ಟಿಗೆ ಇಂಪ್ಯಾಕ್ಟ್‌ ಮಾಡುತ್ತೆ ಅಂತ ಕಾದು ನೋಡ್ಬೇಕು.

Exit mobile version