ಬೀದಿ ನಾಯಿ ಅಂತ್ಯಕ್ರಿಯೆಯಲ್ಲಿ ನಟಿ ರಮ್ಯಾ, ಎಮೋಷನಲ್ಲಾಗಿ ಹೇಳಿದ್ದೇನು?

ಬೀದಿ ನಾಯಿ ಲಾರಾ ಮೇಲೆ ಆಡಿ ಕಾರ್ ಹತ್ತಿಸಿ ಸಾಯಿಸಿದ ಪ್ರಕರಣದ ವಿಚಾರವಾಗಿ ನಟಿ ರಮ್ಯಾ ಸಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ರು.. ಕಾರಿನ ಚಕ್ರಕ್ಕೆ ಸಿಲುಕಿ ನರಳಾಡಿ ನರಳಾಡಿ ಕೊನೆಗೂ ಪ್ರಾಣ ಬಿಟ್ಟ ಶ್ವಾನ.. ಘಟನೆ ಬಳಿಕ ನಾಪತ್ತೆಯಾಗಿದ್ದ ಶ್ವಾನ ನಿನ್ನೆ ಮೃತವಾಗಿ ಪತ್ತೆಯಾಗಿದೆ.. ಸದ್ಯ ನಾಯಿಯ ಪಾರ್ಥಿವವನ್ನ ಆಂಬುಲೆನ್ಸ್ ಮೂಲಕ ಸುಮ್ಮನಹಳ್ಳಿ ಚಿತಾಗಾರಕ್ಕೆ ತರಲಾಗಿದೆ…ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತ ಶ್ವಾನ ಲಾರಾಗೆ ಪೋಸ್ಟ್ ಮಾಟಂ ಮಾಡಲಾಗಿದೆ..ಲಾರಾ ಅಂತ್ಯಕ್ರಿಯೆಗೆ ನಟಿ ದಿವ್ಯ ಸ್ಪಂದನ ಭಾಗಿಯಾಗಿದ್ರು.

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ನಂತ್ರ ಮಾತನಾಡಿದ ನಟಿ ರಮ್ಯ ಆಕ್ಸಿಡೆಂಟ್ ಆಗುತ್ತೆ, ಮನುಷ್ಯ ತಪ್ಪು ಮಾಡ್ತಾನೆ ಸಹಜ, ಆದ್ರೆ ಈ ವಿಚಾರದಲ್ಲಿ ನೋಡಿದಾಗ ಬೇಕಂತಲೇ ನಾಯಿ ಮೇಲೆ ಗಾಡಿ ಹತ್ತಿಸಿದ್ದಾರೆ.ಇದನ್ನ ನೋಡಿ ಸಹಿಸಿಕೊಳ್ಳಲು ಆಗಲಿಲ್ಲ. ನಮ್ಮ ದೇಶದಲ್ಲಿ ಅನಿಮಲ್ ಲಾ‌ ಸ್ಟ್ರಿಕ್ಟ್ ಇಲ್ಲ, 50 ರೂಪಾಯಿ ಕೊಟ್ಟು ಹೊರಗಡೆ ಬರ್ತಾರೆ, ದಯೆ ಅನ್ನೋದು ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಕೂಡ ಇರಬೇಕು, ನಮ್ಮಲ್ಲಿ ರೂಲ್ಸ್‌ ಈ ವಿಷಯದಲ್ಲಿ ಇನ್ನೂ ಸ್ಟ್ರಿಕ್ಟ್‌ ಆಗಬೇಕಿದೆ. ದೊಡ್ಡವರು, ದುಡ್ಡಿರೋರು ಕಾನೂನಿನಲ್ಲಿ ಎಸ್ಕೇಪ್ ಆಗ್ತಾರೆ. ಹಾಗಾಗಿ ರೂಲ್ಸ್‌ ಇನ್ನಷ್ಟು ಬಿಗಿಯಾಗಿಸಬೇಕು ಸರ್ಕಾರಕ್ಕೂ ಮನವಿ ಮಾಡ್ತೇನೆ ಅಂದ್ರು.

Exit mobile version