ರಮ್ಯಾ ಸಿನಿಮಾಗಳಿಗೆ ಕಮ್ ಬ್ಯಾಕ್ ಬಗ್ಗೆ ಆಗಿರೋ ಆಷ್ಟು ಚರ್ಚೆ, ಬೆಟ್ಟಿಂಗ್ ಬಹುಶಃ ಈ ವರ್ಷ ಐಪಿಎಲ್‌ಗೂ ಆಗಿಲ್ಲ.. ಆದ್ರೂ ರಮ್ಯಾ ಫೈನಲಿ ತಮ್ಮದೇ ಹೋಮ್ ಬ್ಯಾನರ್ ಒಂದನ್ನ ಆರಂಭಿಸಿ ಅದಕ್ಕೆ ಆಪಲ್ ಬಾಕ್ಸ್ ಪ್ರೊಡಕ್ಷನ್ಸ್ ಅಂತ ಹೆಸರಿಟ್ಟು, ರಾಜ್ ಬಿ ಶೆಟ್ಟಿನ ಹೀಓ ಮಾಡಿ, ಅದಕ್ಕೇ ಅವರೇ ಹೀರೋಯಿನ್ ಆಗಿ, ಸ್ವಾತಿ ಮುತ್ತಿನ ಮಳೆ ಹನಿಯೆ ಅಂತ ಒಂದು ರೊಮ್ಯಾಂಟಿಕ್ ಟೈಟಲ್ ಇಟ್ಟು ಪೋಸ್ಟರ್ ಬಿಟ್ರು. ಇದು ಎಲ್ಲಾ ಕಡೆ ಸಿಕ್ಕಾಪಟ್ಟೆ ಚರ್ಚೆ ಆದ್ಮೆಲೆ, ಅದ್ಯಾಕೋ ಯಾರ್ ಹೇಳಿದ್ರೋ ಏನೋ ಸಿನಿಮಾದಿಂದ ಹೊರಬಂದ ರಮ್ಯಾ.. ತಮ್ಮ ಬದಲು ಇನ್ನೊಬ್ಬ ಹೀರೋಯಿನ್‌ನ ರಾಜ್ ಬಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡೋಕೆ ಫಿಕ್ಸ್ ಮಾಡಿದ್ರು.
ಈ ನಡುವೆ ರಮ್ಯಾ ಡಾಲಿ ಧನಂಜಯ ಅಭಿನಯದ, ಉತ್ತರಖಾಂಡ ಅನ್ನೋ ಮಾಸ್ ಸಿನಿಮಾದಲ್ಲಿ ನಟಿಸೋ ಸುದ್ದಿ ಹೊರಬಿತ್ತು. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದ, ರೋಹಿತ್ ಪದಕಿ ಟೀಮ್ ಮಾಡ್ತಿರೋ ಮತ್ತೊಂದು ಸಿನಿಮಾಕ್ಕೆ ರಮ್ಯಾನೇ ನಾಯಕಿ ಅನ್ನೋದು ಬಹುತೇಕ ಕನ್ ಫರ್ಮ್ ಆಗಿದೆ, ಇದೇ ಭಾನುವಾರ ಅಂದ್ರೆ ನ.6ಕ್ಕೆ ಸಿನಿಮಾ ಮುಹೂರ್ತ ಕೂಡ ನಡೀತಾ ಇದೆ. ಈ ಎಲ್ಲಾ ಬೆಳವಣಿಗೆಯ ಮಧ್ಯೆ ರಮ್ಯಾ ಮೇಡಂ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಈ ಎರಡು ಸಿನಿಮಾಕ್ಕೂ ಮೊದಲೇ ಪ್ರಮೋಷನ್‌ನಿಂದಲೇ ಎಲ್ಲರ ಗಮನ ಸೆಳೀತಾ ಇರೋ ʻಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಅನ್ನೋ ಸಿನಿಮಾದಲ್ಲಿ ಬಣ್ಣ ಹಚ್ಚಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ರಮ್ಯಾ ಕಮ್ ಬ್ಯಾಕ್ ಅನ್ನು ಸೆಲೆಬ್ರೇಟ್ ಮಾಡುವ, ಸಿನಿಮಾ ಟೀಸರ್ ಈಗ ರಿಲೀಸ್ ಆಗಿದೆ. ಇನ್ನಿಲ್ಲದ ಬಿಲ್ಡಪ್‌ನ ರಮ್ಯಾಗೇ ಕೊಟ್ಟು ಮಾಡಿರೋ ಈ ಟೀಸರ್‌ನ, ಕೊನೆಯಲ್ಲಿ ರಮ್ಯಾ ಬಂದು ನಟಿಸಿದ್ದಾರೆ. ಆದ್ರೆ ಯಾವ ಸೀನ್, ಏನ್ ಪಾತ್ರ ಅನ್ನೋದನ್ನ ಸಿನಿಮಾದಲ್ಲೇ ನೋಡ್ಬೇಕು. ಆದ್ರೆ ಟೀಸರ್ ನೋಡಿದ್ರೆ ಇದ್ಯಾಕೋ ಕಿರಿಕ್ ಪಾರ್ಟಿಯಲ್ಲಿ ಸಾನ್ವಿ ಪಾತ್ರದ ಥರಾನೇ ಕಾಣ್ತಿದೆ.
ಆದ್ರೆ ರಮ್ಯ ಸಿನಿಮಾದಲ್ಲಿ ನಟಿಸ್ತಾರಾ, ಗೆಸ್ಟ್ ಅಪಿಯರೆನ್ಸ್ ಹಾ, ಅಥವ ಇದು ಬರೀ ಪ್ರಮೋಷನ್ ಗಿಮಿಕ್ಕಾ ಅನ್ನೋದು ಸಿನಿಮಾ ಟೀಮೇ ಹೇಳ್ಬೇಕು. ಗುಲ್ಮೊಹರ್ ಫಿಲಮ್ಸ್ ಹಾಗೂ ವರುಣ್ ಸ್ಟುಡಿಯೋಸ್ ನಿರ್ಮಾಣ ಮಾಡ್ತಿರೋ ಸಿನಿಮಾಕ್ಕೇ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಹಾಸ್ಟೆಲ್ ಹುಡುಗರ ಮನಸ್ಸಲ್ಲಿ ಬೆಂಕಿ ಹಚ್ಚೋಕೆ ಬರ್ತಿರೋ ರಮ್ಯಾ, ಈ ಸಿನಿಮಾನೇ ಮೊದಲು ಬಂದ್ರೆ, ಕಮ್‌ಬ್ಯಾಕ್‌ಗೆ ಬಿಲ್ಡಪ್ ಕೊಟ್ಟುಕೊಂಡು ಕಾಯ್ತಾ ಇರೋ ಫ್ಯಾನ್ಸ್ ಆಸೆಗೆ ಬೆಂಕಿ ಬಿದ್ದಂತಾಗೋದು ಪಕ್ಕ..!
ಕಿರಣ್ ಚಂದ್ರ.