ಸೂಪರ್ ಸ್ಟಾರ್ ರಜನಿ ಗೆ ‘ನಿನ್ನ ಸನಿಹಕೆ’ ಚಿತ್ರ ನೋಡಲು ಆಸೆಯಂತೆ..!

ಡಾ.ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸಿರುವ ನಿನ್ನ ಸನಿಹಕೆ ಸಿನಿಮಾವನ್ನು ಸೂಪರ್ ಸ್ಟಾರ್ ರಜನೀಕಾಂತ್ ವೀಕ್ಷಿಸಲಿದ್ದಾರಂತೆ!

ಕನ್ನಡದವರೇ ಆದ ರಜನಿ ಕಾಂತ್ ಗೆ ಡಾ ರಾಜ್ ಕುಮಾರ್ ಎಂದರೆ ಆರಾಧ್ಯ ದೈವ, ಮೊದಲಿನಿಂದಲೂ ಡಾ. ರಾಜ್ ಕುಟುಂಬ ಮತ್ತು ರಜನಿಕಾಂತ್ ಆತ್ಮೀಯ ಸಂಬಂಧವನ್ನೂ ಹೊಂದಿದ್ದಾರೆ. ಧನ್ಯಾಳನ್ನೂ ರಜನಿ ಚಿಕ್ಕವಯಸ್ಸಿನಲ್ಲೇ ಆಡಿಸಿದ್ದರು. ಇದೀಗ ಅದೇ ಪ್ರೀತಿಯಿಂದ ಧನ್ಯಾಳ ಮೊದಲ ಸಿನಿಮಾವನ್ನು ವೀಕ್ಷಿಸಲು ರಜನಿ ಆಸೆಪಟ್ಟಿದ್ದಾರಂತೆ.ಇದಕ್ಕಾಗಿ ಚಿತ್ರತಂಡ ಚೆನ್ನೈನಲ್ಲಿ ರಜನಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಲಿದೆ. ಅಕ್ಟೋಬರ್ 8 ರಂದು ನಿನ್ನ ಸನಿಹಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

****

Exit mobile version