ಬಯೋಪಿಕ್ ಸಿನಿಮಾಗಳನ್ನ ಮಾಡೋದ್ರಲ್ಲಿ ಬಾಲಿವುಡ್ ಎತ್ತಿದ ಕೈ. ತಿಂಗಳಿಗೊಂದು ಬಯೋಪಿಕ್ ಸಿನಿಮಾಗಳು ಸೆಟ್ಟೇರುತ್ತಿವೆ. ಅದರಲ್ಲಿಯೂ ಕ್ರೀಡಾಪಟುಗಳ ಸಿನಿಮಾಗಳಿಗೆ ಹೆಚ್ಚು ಬೇಡಿಯಿದೆ. ಇದೀಗ 1983ರ ವಿಶ್ವಕಪ್ ವಿಜೇತ ಯಾತ್ರೆ ಕುರಿತಾದ ಕಪಿಲ್ ದೇವ್ ಜೀವನ ’83’ ಸಿನಿಮಾ ತಯಾರಾಗಿದ್ದು ಡಿ.24ರಂದು ತೆರೆ ಕಾಣಲಿದೆ.
೮೩’ ಸಿನಿಮಾಕ್ಕೆ ಸುದೀಪ್ ಸಿಕಿದ್ದು, ನಿನ್ನೆ ಸಿನಿಮಾದ ಪ್ರಚಾರ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದು, ಸಿನಿತಂಡದ ರಣ್ವೀರ್ ಸಿಂಗ್, ಕಪಿಲ್ ದೇವ್, ಕೃಷ್ಣಮಾಚಾರಿ ಶ್ರೀಕಾಂತ್, ಕಬೀರ್ ಖಾನ್ ಮತ್ತು ಸ್ಯಾಂಡಲ್ ವುಡ್ ನಟ ಸುದೀಪ್ ಭಾಗವಹಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗಬೇಕು, ಸುದೀಪ್ ಅವರು ರಾಹುಲ್ ದ್ರಾವಿಡ್ ಪಾತ್ರ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಸುದೀಪ್ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
”ನಾನು ನಟಿಸಲು ತಯಾರು, ನಿರ್ದೇಶಕ ಕಬೀರ್ ಖಾನ್ ಇಲ್ಲಿಯೇ ಇದ್ದಾರೆ. ಅವ್ರು ನಿರ್ದೇಶನ ಮಾಡ್ತಾರಾ ಕೇಳಿ ಎಂದ ಸುದೀಪ್ ಮಾತಿಗೆ ಉತ್ತರಿಸಿದ ನಿದೇರ್ಶಕ ಕಬೀರ್ ಸಿಂಗ್ ಸಿನಿಮಾ ಹಕ್ಕು ತಂದುಕೊಟ್ಟರೆ ಖಂಡಿತವಾಗಿಯೂ ರಾಹುಲ್ ದ್ರಾವಿಡ್ ಜೀವನದ ಬಗ್ಗೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ರಣ್ವೀರ್ ಸಿಂಗ್ ಅದ್ಭುತ ನಿರ್ದೇಶಕ, ನಿರ್ಮಾಪಕ ಇಲ್ಲಿಯೇ ಇದ್ದಾರೆ. ನಟ ಇಲ್ಲಿಯೇ ಇದ್ದಾರೆ. ಎಲ್ಲರೂ ಒಪ್ಪಿಕೊಂಡು ಆಗಿದೆ. ನಾನು ಈ ಸಿನಿಮಾದಲ್ಲಿ ಯಾವ ಪಾತ್ರ ಮಾಡಬಹುದು ಎಂದು ಪ್ರಶ್ನಿಸುತ್ತಾರೆ.. ಇಲ್ಲಲಿಗೆ ಒಂದು ಸಿನಿಮಾ ಪ್ರಚಾರದ ವೇದಿಕೆಯಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುವ ಕಾರ್ಯಕ್ಕೆ ಶಂಕುಸ್ಥಾಪನೆ ಆದಂತಾಗಿದೆ. ಆದಷ್ಟು ಬೇಗ ಸುದೀಪ್ ನಟನೆಯಲ್ಲಿ ರಾಹುಲ್ ದ್ರಾವೀಡ್ ಸಿನಿಮಾ ತೆರೆಗೆ ಬರಲಿ ಎನ್ನೋಣ..
****