ಪುನೀತ್ ರಾಜ್ಕುಮಾರ್ ಅಗಲಿಕೆಗೆ ಒಂದು ವರ್ಷ; ಕಣ್ಣೀರಲ್ಲೇ ಕಳೆದು ಹೋಯ್ತು 365 ದಿನ
ಪುನೀತ್ ಫಿಟ್ ಆಗಿ ಇದ್ದವರು. ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಅವರಿಗೆ ಹೃದಯಘಾತವಾಗಿದೆ ಎಂದಾಗ ಯಾರೂ ನಂಬಲಿಲ್ಲ. ಕೆಲವೇ ಗಂಟೆಗಳಲ್ಲಿ ಪುನೀತ್ ನಿಧನವಾರ್ತೆ ಹೊರಬಿತ್ತು.
ಸಮಾಧಿಗೆ ಪೂಜೆ
ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಇದೆ. ಬೆಳಿಗ್ಗೆ 9 ಗಂಟೆಗೆ ಕುಟುಂಬದವರು ಸಮಾಧಿಗೆ ಬರಲಿದ್ದಾರೆ. ಸಮಾಧಿ ಬಳಿ ಪುನೀತ್ಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ಮಾಡಲಿದ್ದಾರೆ. ಇಡೀ ದೊಡ್ಮನೆ ಕುಟುಂಬ ಈ ಪೂಜೆಗೆ ಬರಲಿದೆ. ಜೊತೆಗೆ ಕನ್ನಡ ಚಿತ್ರರಂಗದವರು, ಅಪ್ಪು ಆಪ್ತರು, ಸ್ನೇಹಿತರು ಪೂಜೆಯಲ್ಲಿ ಭಾಗಿ ಆಗಲಿದ್ದಾರೆ.
ಅಪ್ಪು ಸಮಾಧಿಗೆ ಪೂಜೆ ಮಾಡಿದ ನಂತರದಲ್ಲಿ ಕುಟುಂಬ ಮನೆಗೆ ಮರಳಲಿದೆ. ಅಲ್ಲಿಯೂ ಪೂಜೆ ಇರಲಿದೆ. ವರ್ಷದ ಕಳಸ ಪೂಜೆಯನ್ನು ಕುಟುಂಬ ಮಾಡಲಿದೆ.
ಪುನೀತ್ ಸಾಕಷ್ಟು ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದರು. ಈಗ ಪುನೀತ್ ಅವರನ್ನು ಇದೇ ರೀತಿಯ ಕೆಲಸಗಳ ಮೂಲಕ ಫ್ಯಾನ್ಸ್ ನೆನಪಿಸಿಕೊಳ್ಳಲಿದ್ದಾರೆ. ಇಂದು ರಾಜ್ಯದ ವಿವಿಧ ಕಡೆಗಳಲ್ಲಿ ರಕ್ತದಾನ, ಅನ್ನದಾನ ಶಿಬಿರ ಇರಲಿದೆ.
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿರುವ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಭಿಮಾನಿಗಳು
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿರುವ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಭಿಮಾನಿಗಳು ಕೂಡ ದುಃಖದಲ್ಲಿದ್ದಾರೆ. ಅವರು ಅಗಲಿ ಒಂದು ವರ್ಷ ಕಳೆದರೂ ನೋವು ಪೂರ್ತಿಯಾಗಿ ಕಡಿಮೆ ಆಗಿಲ್ಲ.
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿರುವ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಭಿಮಾನಿಗಳು ಕೂಡ ದುಃಖದಲ್ಲಿದ್ದಾರೆ. ಅವರು ಅಗಲಿ ಒಂದು ವರ್ಷ ಕಳೆದರೂ ನೋವು ಪೂರ್ತಿಯಾಗಿ ಕಡಿಮೆ ಆಗಿಲ್ಲ.