ಫಾರ್ಮ್ ಹೌಸ್ ಕೃಷಿಯಲ್ಲಿ ಪವರ್ ಸ್ಟಾರ್ ಲಾಕ್..


ಕೊರೊನಾ ಕಂಟಕದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ.. ಭಾರತದ ಕಥೆಯಂತೂ ಊಹಿಸೋಕು ಆಗಲ್ಲ ಬಿಡಿ.. ಎಲ್ಲಿ ನೋಡಿದ್ರೂ ಸಾವು- ನೋವಿನದ್ದೇ ಸ್ಥಿತಿ.. ಕೊರೊನಾ ಅಕ್ಷರಸಃ ನರ ಭಕ್ಷಕನಂತೆ ಕಾಡ್ತಿದೆ.. ಕೊರೊನಾ ಕಾರಣದಿಂದ ರಾಜ್ಯ ಸರ್ಕಾರ ಲಾಕ್ ಡೌನ್ ಆದೇಶ ನೀಡಿದೆ.‌ ಇದರಿಂದಾಗಿ ಬಹುತೇಕ ಎಲ್ಲಾ ಕ್ಷೇತ್ರಗಳು ಸುಮ್ಮನಾಗಿ ಬಿಟ್ಟಿವೆ.‌ ಒಂದಷ್ಟು ಕ್ಷೇತ್ರಗಳಿಗೆ ಅವಕಾಶ ಕೊಟ್ಟಿದ್ರೂ ಅದು ಆರಕ್ಕೇರದ ಮೂರಕ್ಕೆ ಇಳಿಯದ ಪರಿಸ್ಥಿತಿ..

ಈ ಮಧ್ಯೆ ಸಿನಿಮಾ ರಂಗ ತತ್ತರಿಸಿ ಹೋಗಿದೆ.‌ ಯಾವುದೇ ರೀತಿಯ ಬೆಳವಣಿಗೆ ಕಾಣ್ತಿಲ್ಲ.. ಸದಾ ಲೈಟ್ಸ್, ಕ್ಯಾಮೆರಾ, ಆ್ಯಕ್ಷನ್ ಪದಗಳನ್ನು ಕೇಳ್ತಿದ್ದ ನಟ- ನಟಿಯರು ಮನೆಯಲ್ಲೇ ಕೂರುವಂತಾಗಿದೆ… ಸ್ಟಾರ್ ನಟರೂ ಲಾಕ್ ಡೌನ್ನಿಂದ ಮನೆಯಲ್ಲೇ ಕೂರುವಂತಾಗಿದೆ‌‌.. ಅಭಿಮಾನಿಗಳಲ್ಲೂ ಒಂದಷ್ಟು ಕುತೂಹಲ ಕಾಡ್ತಿದೆ‌‌.. ತಮ್ಮ ನೆಚ್ಚಿನ ನಟರ ಆರೋಗ್ಯ ಹೇಗಿದೆ.‌ ಲಾಕ್ ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಅನ್ನೋ ಸಹಜ ಪ್ರಶ್ನೆಗಳು ಕಾಡೇ ಕಾಡುತ್ತೆ.. ಅದರಲ್ಲೂ ಸದಾ ಸಿನಿಮಾ.. ವರ್ಕೌಟ್.. ಅಂತಾ ಪಾದರಸದಂತೆ ಓಡಾಡಿಕೊಂಡಿರ್ತಿದ್ದ ಪವರ್ ಸ್ಟಾರ್ ಏನ್ ಮಾಡ್ತಿದ್ದಾರೆ… ಅನ್ನೋದು ಎಲ್ಲರ ಪ್ರಶ್ನೆ ಆಗಿತ್ತು.. ಅದಕ್ಕೆ ಉತ್ತರ ಇಲ್ಲಿದೆ..

ಪವರ್ ಸ್ಟಾರ್ ಪುನೀತ್… ಸಿನಿಮಾ, ಬ್ಯುಸಿನೆಸ್, ವರ್ಕೌಟ್ ಅಂತಾ ಸದಾ ಕ್ರಿಯಾಶೀಲರಾಗಿ ಇರ್ತಿದ್ರು.. ಇದೀಗ ಲಾಕ್ ಡೌನ್ ಇರೋದ್ರಿಂದ ಪವರ್ ಸ್ಟಾರ್ ಫಾರ್ಮ್ ಹೌಸ್ ಕಡೆ ಮುಖ ಮಾಡಿದ್ದಾರೆ.. ದೊಡ್ಮನೆ ಹುಡ್ಗನಿಗೆ ಹಳ್ಳಿ, ಹೊಲ, ಗದ್ದೆ ಸುತ್ತಾಟವೆಂದ್ರೆ ಬಲು ಇಷ್ಟ.. ಇದೇ ಕಾರಣಕ್ಕೆ ಫಾರ್ಮ್ ಹೌಸ್ನಲ್ಲಿ ಬೀಡುಬಿಟ್ಟಿರೋ ಪುನೀತ್ ಕೃಷಿ ಕೆಲಸಗಳನ್ನು ಮಾಡ್ತಿದ್ದಾರೆ. ತಾವೇ ಖುದ್ದಾಗಿ ಗಿಡ ನೆಡೋದು, ಬೀಜ ಬಿತ್ತನೆ ಮಾಡೋ ಕೆಲಸದಲ್ಲಿ ನಿರತರಾಗಿದ್ದಾರೆ…

Exit mobile version