ಕೆಜಿಎಫ್2 ಸಿನಿಮಾ ಮತ್ತೆ ರೀ ಶೂಟ್ ಮಾಡ್ತಾರಂತೆ !

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2ತೆರೆಗೆ ಬರಲು ಸಿದ್ಧವಾಗಿದೆ.. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮುಗಿಸಿ ಸಿನಿಮಾತಂಡ ದೇವಾಲಯಗಳಿಗೆ ಭೇಟಿ ಕೊಟ್ಟು ಇನ್ನೇನು ಪ್ರಚಾರ ಕಾರ್ಯ ಆರಂಭ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ ..ಅಭಿಮಾನಿಗಳು ಕೂಡ ಇನ್ನೇನು ಪ್ರಚಾರ ಕಾರ್ಯ ಭರ್ಜರಿಯಾಗಿ ಶುರುವಾಗುತ್ತೆ …ಸಿನಿಮಾ ನೋಡುವುದಷ್ಟೇ ಬಾಕಿ ಇರೋದು ಅಂದುಕೊಳ್ಳುವಾಗ ವೇಳೆಗೆ ಕೆಜಿಎಫ್ ತಂಡದಿಂದ ಶಾಕಿಂಗ್ ನ್ಯೂಸ್ ಸಿಕ್ಕಿದೆ …ಹೌದು ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಮತ್ತೆ ರೀ ಶೂಟ್ ಮಾಡಲು ಪ್ರಶಾಂತ್ ನೀಲ್ ಸಿದ್ಧತೆ ನಡೆಸಿದ್ದಾರಂತೆ

ಈಗಾಗಲೇ ಅನೌನ್ಸ್ ಮಾಡಿರುವಂತೆ ಏಪ್ರಿಲ್ ತಿಂಗಳಲ್ಲಿ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡಬೇಕಿದೆ… ಆದರೆ ಬಿಡುಗಡೆಗೆ ಕೆಲವೇ ದಿನ ಇರುವಾಗ ಪ್ರಶಾಂತ್ ನೀಲ್ ಮತ್ಯಾಕೆ ಸಿನಿಮಾವನ್ನು ರೀ ಶೂಟ್ ಮಾಡುತ್ತಿದ್ದಾರೆ….ಎಂಬುದು ಅಭಿಮಾನಿಗಳ ಆಲೋಚನೆ ಆಗಿದೆ …ಆದರೆ ಕ್ವಾಲಿಟಿ ವಿಚಾರದಲ್ಲಿ ಇಲ್ಲಿ ಕಾಂಪ್ರಮೈಸ್ ಆಗದ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾದ ಹಾಡೊಂದನ್ನು ರೀಶೂಟ್ ಮಾಡಲು ಸಿದ್ಧತೆ ಮಾಡಿದ್ದಾರೆ…

ಚಾಪ್ಟರ್ 2 ಸಿನಿಮಾದಲ್ಲಿ ಸಿನಿಮಾದ ನಾಯಕ ರಾಖಿ ಇಂಟ್ರಡಕ್ಷನ್ ಸಾಂಗ್ ಶೂಟ್ ಆಗಿದೆ… ಆದರೆ ಪ್ರಶಾಂತ್ ನೀಲ್ ಅವ್ರಿಗೆ ಅದ್ಯಾಕೋ ಈ ಹಾಡು ಸಮಾಧಾನ ಕೊಡುತ್ತಿಲ್ಲವಂತೆ ಹಾಗಾಗಿ ಈಗ ಇಂಟ್ರಡಕ್ಷನ್ ಹಾಡನ್ನ ಮತ್ತೆ ಶೂಟ್ ಮಾಡಲು ನಿರ್ಧಾರ ಮಾಡಿದ್ದಾರೆ… ಹೈದ್ರಾಬಾದ್ ನಲ್ಲಿ ಅದಕ್ಕಾಗಿ ಅದ್ದೂರಿಯಾದ ಸೆಟ್ ನಿರ್ಮಾಣವಾಗುತ್ತಿತ್ತು ಸುಮಾರು 5ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಹರ್ಷ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಲಿದ್ದಾರೆ …

Exit mobile version