ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ ದಂಡುಪಾಳ್ಯ ಗ್ಯಾಂಗ್‌

ಸ್ಯಾಂಡಲ್‌ ವುಡ್‌ ನಲ್ಲಿ ಶ್ರೀನಿವಾಸ್‌ ರಾಜು ಅಂದ ತಕ್ಷಣ ನೆನಪಿಗೆ ಬರೋದು ದಂಡುಪಾಳ್ಯ ಸಿನಿಮಾ …ದಂಡುಪಾಳ್ಯ ಸಿನಿಮಾ ಮೂಲಕ ಒಂದಿಷ್ಟು ಪ್ರೇಕ್ಷಕರನ್ನ ರಂಜಿಸಿ ಮತ್ತಷ್ಟು ಜನರನ್ನ ಬೆಚ್ಚಿಬೀಳಿಸಿದ ಡೈರೆಕ್ಟರ್‌ ಶ್ರೀನಿವಾಸ್‌ ರಾಜು…ದಂಡುಪಾಳ್ಯ ಪಾರ್ಟ್‌ ೧, ಪಾರ್ಟ್‌ ೨ ಸಿನಿಮಾ ಮಾಡಿ ಒಂದಷ್ಟು ವಿವಾದಗಳನ್ನೂ ಮಾಡಿಕೊಂಡು ಕೆಲ ಸಮಯ ಸೈಲೆಂಟ್‌ ಆಗಿದ್ದ ಶ್ರೀನಿವಾಸ್‌ ರಾಜ್‌ ಈಗ ಮತ್ತೆ ಬಂದಿದ್ದಾರೆ…

ಅದೇ ತಂಡವನ್ನ ಕಟ್ಟಿಕೊಂಡು ಈಗ ಹೊಸ ಕೊಲೆಯೊಂದರ ಸುತ್ತಾ ಸುತ್ತೋ ಕಥೆಯನ್ನ ಹೆಣೆದಿದ್ದಾರೆ ಶ್ರೀನಿವಾಸ್‌ ರಾಜು …ಈ ಚಿತ್ರಕ್ಕೆ ಹುಬ್ಬಳ್ಳಿ ಡಾಬಾ ಎಂದು ಹೆಸರಿಟ್ಟಿದ್ದು ಚಿತ್ರದಲ್ಲಿ ಪೂಜಾಗಾಂಧಿ, ನವೀನ್‌ ಚಂದ್ರ,ರವಿಶಂಕರ್‌, ಅಯ್ಯಪ್ಪ ಶರ್ಮಾ, ಮಕರಂದ್‌ ದೇಶ್ ಪಾಂಡೆ, ರವಿಕಾಳೆ ಇನ್ನು ಅನೇಕರು ಅಭಿನಯಿಸಿದ್ದಾರೆ..

ಹುಬ್ಬಳ್ಳಿ ಡಾಬಾ ಸಿನಿಮಾ ಕನ್ನಡ ಹಾಗೂ ತೆಲುಗು ಎರಡರಲ್ಲಿಯೂ ತೆರೆಗೆ ಬರ್ತಿದ್ದು ಸದ್ಯ ರಿಲೀಸ್‌ ಆಗಿರೋ ಟೀಸರ್‌ ನೋಡಿದ್ರೆ ಇದು ದಂಡುಪಾಳ್ಯ ಸೀಕ್ವೆಲ್‌ ಇರಬಹುದಾ ಅನ್ನೋ ಅನುಮಾನಗಳು ಬರ್ತಿದೆ…ಒಟ್ಟಾರೆ ಶ್ರೀನಿವಾಸ್‌ ರಾಜು ಅವ್ರ ಜೊತೆ 2012ರಲ್ಲಿ ಶುರುವಾದ ಈ ದಂಡುಪಾಳ್ಯದ ಜರ್ನಿ ಇಂದಿಗೂ ಮುಂದುವರೆಯುತ್ತಿದೆ….ಇದೇ ತಿಂಗಳ ನವೆಂಬರ್‌ 11ರಂದು ಹುಬ್ಬಳ್ಳಿ ಡಾಬಾ ರಾಜ್ಯಾದ್ಯಂತ ರಿಲೀಸ್‌ ಆಗ್ತಿದೆ…

Exit mobile version