ಫೆ.25ರಿಂದ ಕಿಕ್ಕೇರಿಸುತ್ತೆ ಓಲ್ಡ್‌ ಮಾಂಕ್‌..!

ಮಾಡ್ರನ್‌ ಶ್ರೀನಿವಾಸ ಕಲ್ಯಾಣ, ಥ್ರಿಲ್ಲರ್‌ ಬೀರ್‌ಬಲ್‌ ಸಿನಿಮಾದ ಬಳಿಕ ಕಾಮಿಡಿ ಎಂಟರ್‌ಟೈನರ್‌ ಓಲ್ಡ್‌ ಮಾಂಕ್‌ ತೆರೆಗೆ ತರಲು ರೆಡಿಯಾಗಿದ್ದಾರೆ ಎಂ.ಜಿ ಶ್ರೀನಿವಾಸ್‌. ಮೊದಲು ಸಿನಿಮಾದ ಟೈಟಲ್‌ ʻಓಲ್ಡ್‌ ಮಂಕ್‌ʼ, ನಂತ್ರ ಬಂದ ಪೋಸ್ಟರ್‌ಗಳು, ರಿಲೀಸ್‌ ಆಗಿರೋ ಟ್ರೇಲರ್ರು, ಜವಾರಿ ಉತ್ತರ ಕರ್ನಾಟಕದ ಗಿಚ್ಚ ಗಿಲಿ ಗಿಲಿ ಸಾಂಗ್‌ ಸಿಖ್ಕಾಪಟ್ಟೆ ಟ್ರೆಂಡ್‌ ಆಗಿತ್ತು, ಈಗ ಫೈನಲಿ ಸಿನಿಮಾ ರಿಲೀಸ್‌ ಡೇಟ್ ಫೈನಲ್‌ ಆಗಿದೆ. ಇದೇ ಫೆ.25ಕ್ಕೆ ಕಾಮಿಡಿ ಎಂಟರ್‌ಟೈನರ್‌ ʻಓಲ್ಡ್‌ ಮಾಂಕ್‌ʼ ರಿಲೀಸ್‌ ಆಗಲಿದೆ.

ಸಿನಿಮಾದಲ್ಲಿ ಶ್ರೀನಿಗೆ ಜೋಡಿಯಾಗಿ ಅದಿತಿ ಪ್ರಭುದೇವಾ ನಟಿಸುತ್ತಿದ್ದಾರೆ. ಇವ್ರ ಜೊತೆಗೆ ಪ್ರಮುಖ ಪಾತ್ರದಲ್ಲಿ ಎಸ್‌.ನಾರಾಯಣ್‌, ಸಿಹಿ ಕಹಿ ಚಂದ್ರು, ಸುಜಯ್‌ ಶಾಸ್ತ್ರಿ, ಅರುಣಾ ಬಾಲರಾಜ್‌ ಸೇರಿದಂತೆ ಸಾಕಷ್ಟು ಓಲ್ಡ್‌ ಮಾಂಕ್‌ಗಳ ದೊಡ್ಡ ಸ್ಟಾರ್‌ ಕಾಸ್ಟ್‌ ಸಿನಿಮಾಕ್ಕಿದೆ.

ಸೌರಭ್‌-ವೈಭವ್‌ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದು, ಭರತ್‌ ಪರಶುರಾಮನ್‌ ಕ್ಯಾಮರಾವರ್ಕ್‌ ಮಾಡಿದ್ದಾರೆ. ಸಿನಿಮಾದ ಟೃಎಲರ್‌ ಹಾಗೂ ಸಾಂಗ್‌ ನೋಡಿದ್ರೆ ಸಿನಿಮಾದಲ್ಲಿ ಎಂಟರ್‌ಟೈನ್‌ಮೆಂಟ್‌ನ ದೊಡ್ಡ ಪ್ಯಾಕೇಜೇ ಇಟ್ಟಿರೋ ಹಾಗಿದೆ. ಈ ʻಓಲ್ಡ್‌ ಮಾಂಕ್‌ʼಗಳ ನ್ಯೂ ಅವತಾರ ನೋಡ್ಬೇಕು ಅಂದ್ರೆ ಫೆ.25ರವರೆಗೆ ಕಾಯ್ಲೆಬೇಕು.

Exit mobile version