3ನೇ ವಾರವೂ ನಿನ್ನ ಸನಿಹಕೆ‌ ಹೌಸ್ ಫುಲ್..!

ಸಲಗ, ಕೋಟಿಗೊಬ್ಬ ಚಿತ್ರಗಳ‌ ಅಬ್ಬರದ ನಡುವೆಯೂ ನಿನ್ನ‌ಸನಿಹಕೆ‌ ಸಿನಿಮಾ ತನ್ನ ನೆಲೆ ಭದ್ರಪಡಿಸಿಕೊಂಡಿದೆ. 25ನೇ ದಿನದ ಹೊಸ್ತಿಲಲ್ಲಿರುವ ನಿನ್ನ ಸನಿಹಕೆ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.ಸಿನಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿರುವ ಖುಷಿಯಲ್ಲಿರುವ ಚಿತ್ರ ತಂಡಕ್ಕೆ ಮತ್ತೊಂದು ಬಂಪರ್ ಆಫರ್ ಬಂದಿದೆ..! ನಿನ್ನ ಸನಿಹಕೆ‌ ಚಿತ್ರಕ್ಕೆ ಸೂಪರ್ ಬ್ಯುಸಿನೆಸ್ ಆಫರ್ ಸಿಕ್ಕಿದ್ದು…!  ಟಿವಿ,ಡಿಜಿಟಲ್, ಡಬ್ಬಿಂಗ್ ಗೆ  ಒಳ್ಳೆಯ ಬೇಡಿಕೆ ಬಂದಿದೆ.

ಮಲ್ಟಿಪ್ಲೆಕ್ಸ್ ಗಳಲ್ಲಿ‌ ಲವ್ ಫ್ಯಾಮಿಲಿ‌ ಎಂಟ್ರಟೈನ್ಮೆಂಟ್ಗೆ ಕನ್ನಡ ಪ್ರೇಕ್ಷಕರು ಬಹುಪರಾಕ್ .

ನಿನ್ನ ಸನಿಹಕೆ‌ ಸಿನಿಮಾ ಸಿಕ್ತಿರೋ‌ ಕ್ಲಾಸ್ ಮಾಸ್ ರೆಸ್ಪಾನ್ಸ್ ಹಾಗೂ ಡಾ.ರಾಜ್ ಕುಮಾರ್ ಮೊಮ್ಮಗಳ‌ ಚೊಚ್ಚಲ‌ ಸಿನಿಮಾ. ಈ ಎಲ್ಲಾ ಕಾರಣಗಳಿಂದ  ಈ ಚಿತ್ರಕ್ಕೆ ಟಿವಿ ಮತ್ತು ಡಿಜಿಟಲ್ ಬ್ಯುಸಿನೆಸ್ಗೆ ಬೇಡಿಕೆ ಬಂದಿದೆ. ಅದ್ರಂತೆ ಈಗಾಗ್ಲೇ ಚಿತ್ರತಂಡಕ್ಕೆ ಮೂರು ದೊಡ್ಡ ಚಾನೆಲ್ ಗಳಿಂದ ಆಫರ್ ಬಂದಿದ್ದು, ಅಮೇಜಾನ್ ಟೀಮ್‌ ಜೊತೆಗೂ ಚಿತ್ರತಂಡ ಮಾತುಕತೆ ನಡೆಸ್ತಿದೆ. ನಿನ್ನ ಸನಿಹಕೆ ಚಿತ್ರ  ಯಶಸ್ವಿ 25 ದಿನಗಳನ್ನ ಪೂರೈಸೋ ಹೊಸ್ತಿಲಲ್ಲಿರೋ ಹೊತ್ತಲ್ಲೇ ಹೀಗೊಂದು ಗುಡ್ ನ್ಯೂಸ್ ಹೊರಬಂದಿದೆ. ಇದೇ ಖುಷಿಯಲ್ಲಿ, ಇದೇ ಚಿತ್ರತಂಡ ಮತ್ತೊಂದು ಚಿತ್ರ ಮಾಡೋ‌ದಕ್ಕೆ ಯೋಜನೆ ಹಾಕಿಕೊಳ್ತಿದೆ.

****

Exit mobile version