ಜನಮೆಚ್ಚುಗೆಯ ಅಲೆಯಲ್ಲಿ ‘ನಿನ್ನ ಸನಿಹಕೆ’..!

ಕರುನಾಡಿನಲ್ಲಿ ಕೊರೊನಾ ಸೋಂಕಿನ ಹಾವಳಿ, ‌ಲಾಕ್ ಡೌನ್ ಎಲ್ಲಾ ಮುಗಿದ್ಮೇಲೆ ತೆರೆಕಂಡು ಸಿನಿಪ್ರೀಯರು ಅಪ್ಪಿ ಒಪ್ಪಿಕೊಂಡ ಮೊದಲ ಕನ್ನಡ ಚಿತ್ರ ‘ನಿನ್ನ‌ ಸನಿಹಕೆ’.

ಶುಕ್ರವಾರವಷ್ಟೇ ನಿನ್ನ ಸನಿಹಕೆ ರಾಜ್ಯದೆಲ್ಲೆಡೆ ಪ್ರದರ್ಶನವನ್ನ ಆರಂಭಿಸಿದೆ. ಇಂದು ಮತ್ತು ನಾಳೆ ವಿಕೆಂಡ್‌ ರಜಾದಿನವನ್ನು ಸಂಭ್ರಮಿಸುವವರೆಲ್ಲಾ ನಿನ್ನ ಸನಿಹಕೆ ಸಿನಿಮಾ ನೋಡಲು‌ ಮುಗಿಬಿದ್ದಿದ್ದಾರೆ. ಮಲ್ಟಿ ಪ್ಲೆಕ್ಸ್ ಗಳಲ್ಲಿ  ಶೇಕಡ 80%  ಜನ‌ ತುಂಬಿದ್ದು, ಕೆಲವು ಕಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ‌

ಮಲ್ಟಿ ಫ್ಲೆಕ್ಸ್ ವೊಂದರಲ್ಲಿ ಪ್ರೇಕ್ಷಕರೊಂದಿಗೆ ಧನ್ಯಾ ಮತ್ತು ಸೂರಜ್

ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಶಿವಮೊಗ್ಗ, ಮಂಡ್ಯ ಸೇರಿ ರಾಜ್ಯದಾದ್ಯಂತ ನಿನ್ನ ಸನಿಹಕೆ ಚಿತ್ರಕ್ಕೆ ಕನ್ನಡ ಪ್ರೇಕ್ಷಕರಿಂದ ಅಭಿನಂದನೆಯ ಸುರಿಮಳೆ. ಯುವ ಸಮುದಾಯವಂತೂ ಚಿತ್ರ ನೋಡಿ ಸಂಭ್ರಮಿಸ್ತಿದೆ. ಒಟ್ಟಾರೆ ಜನಮೆಚ್ಚುಗೆಯ ಅಲೆಯಲ್ಲಿ ನಿನ್ನ ಸನಿಹಕೆ ತಂಡ  ಸಂಭ್ರಮಿಸುತ್ತಿದೆ.

ಮೊದಲ ದಿನ ಮುಖ್ಯ ಚಿತ್ರಮಂದಿರದಲ್ಲಾದ ತಾಂತ್ರಿಕ ತೊಂದರೆಯಿಂದ ಇದ್ದ ಕನ್ಫೂಶನ್ ಗೆ ಇವತ್ತು ಕ್ಲ್ಯಾರಿಟಿ ಸಿಕ್ಕಿದ್ದು, ಜನ ಥಿಯೇಟರಿನತ್ತ ಧಾವಿಸುತ್ತಿದ್ದಾರೆ. 100%  ತೆರೆಗಳು ಒಪನ್ ಆದ್ಮೇಲೆ ಕನ್ನಡ ಚಿತ್ರವೊಂದನ್ನ ವೀಕ್ಷಿಸೋದಕ್ಕೆ ಇಷ್ಟು ಮಟ್ಟಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರ್ತಿರೋದು ಚಿತ್ರೋದ್ಯಮಕ್ಕೆ ಸಂತಸ ತಂದಿದೆ.

ತುಂಬಿದ ಮಲ್ಟಿಪ್ಲೆಕ್ಸ್ ಗಳಿಗೆ ನಾಯಕ ಸೂರಜ್ ಗೌಡ ನಾಯಕಿ ಧನ್ಯರಾಮ್ ಕುಮಾರ್ ಭೇಟಿ:

ಚಿತ್ರದ ನಾಯಕ ಮತ್ತು ನಾಯಕಿ ಪ್ರೇಕ್ಷಕರ ಅಭಿಪ್ರಾಯ ಪಡೆಯೋದ್ರ ಜೊತೆಗೆ ತಮ್ಮ ಸಿನಿಮಾ ಯಶಸ್ಸಿಗೆ ಪ್ರಚಾರ ಮಾಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.

****

Exit mobile version