ತಾತ, ತಂದೆ ಹೆಸ್ರು ಉಳಿಸಿ ಅಂದಿದ್ರು ‘ಅಪ್ಪು ಅಣ್ಣಾ’

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಅಭಿನಯದ ರೈಡರ್ ಚಿತ್ರದ ಪ್ರಿ ರಿಲೀಸ್ ಇವೆಂಟ್ ನಿನ್ನೆ (ಡಿ.22) ನಡೆದಿದ್ದು, ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುರ್ ಹಲವು ನಿರ್ದೇಶಕರು, ನಿರ್ಮಾಪಕರು ಆಗಮಿಸಿ ರೈಡರ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ಯುವರಾಜ ನಿಖಿಲ್ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದರು. 30 ಸೆಕೆಂಡುಗಳು ಮೌನಾಚರಣೆ ಮಾಡಿ ನಂತರ ಮಾತನಾಡಿದ ನಿಖಿಲ್ ಅಣ್ಣಾವ್ರ ಕುಟುಂಬದೊಂದಿಗಿನ ಒಡನಾಟ ಹಾಗೂ ದೊಡ್ಮನೆ ಜನರ ಪ್ರೀತಿಯನ್ನು ನೆನೆದು ಭಾವುಕರಾದ್ರು. ನಿಖಿಲ್ ಅಭಿನಯದ ಮೊದಲ ಸಿನಿಮಾ ಜಾಗ್ವಾರ್ ಚಿತ್ರದ ವೇಳೆ ಪುನೀತ್ ರಾಜಕುಮಾರ್ ನಿಖಿಲ್ ಗೆ ಕರೆ ಮಾಡಿ ವಿಶ್ ಮಾಡಿದ್ರಂತೆ, ತಾತ ಮತ್ತು ತಂದೆಗೆ ಗೌರವತರುಂತ ಕೆಲಸ ಮಾಡಿ ಎಂದು ಪ್ರೋತ್ಸಾಹಿಸಿದ ಬಗ್ಗೆ ಮಾತನಾಡಿದ್ರು ನಿಖಿಲ್

YouTube player

ನಿಖಿಲ್ ಕುಮಾರ್ ಹೀರೋ ಆಗಿ ನಟಿಸುತ್ತಿರೋ ಮೂರನೇ ಸಿನಿಮಾ ರೈಡರ್.. ಸೀತಾರಾಮ ಕಲ್ಯಾಣದಲ್ಲಿ ಒಂದೊಳ್ಳೆ ಫ್ಯಾಮಿಲಿ ಲವ್ ಸ್ಟೋರಿಯನ್ನ ಹೇಳಿದ್ದ ನಿಖಿಲ್ ರೈಡರ್ ಮೂವಿಯಲ್ಲಿ ಒಬ್ಬ ಸ್ಪೋರ್ಟ್ಸ್ ಮ್ಯಾನ್ ಆಗಿ ಲವ್ ಸ್ಟೋರಿಯನ್ನ ಕಟ್ಟಿಕೊಡುತ್ತಿದ್ದಾರೆ. ವಿಜಯ್ ಕುಮಾರ್ ಕೊಂಡ ಡೈರೆಕ್ಷನ್ ನಲ್ಲಿ ಮೂಡಿ ಬಂದಿರೋ ರೈಡರ್ನಲ್ಲಿ ಕಾಶ್ಮೀರಿ ಪರ್ದೇಸಿ ನಟಿಸಿದ್ದಾರೆ. ಡಿಸೆಂಬರ್ 24ರಂದು ತೆರೆ ಮೇಲೆ ಬರೋ ರೈಡರ್ ಸಿನಿಮಾ ರಾಜ್ಯದ 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಒಟ್ನಲ್ಲಿ ಈ ವಾರ ಡಾಲಿಯ ಬಡವ ರಾಸ್ಕಲ್ ಹಾಗು ನಿಖಿಲ್ ನಟಿಸಿರೋ ರೈಡರ್ ಸಿನಿಮಾಗಳ ಅಬ್ಬರ ಜೋರಾಗಿರುತ್ತೆ ಅನ್ನೋದಂತು ಕನ್ಫರ್ಮ್.

****

Exit mobile version