ಕೊಡಗಿನ ಕನ್ನಡ ವೀರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜೀವನ ಚರಿತ್ರೆ ಆಧರಿಸಿ ಚಿತ್ರ ಮಾಡಲು ಜನರಲ್ ಕಾರ್ಯಪ್ಪ ಕುಟುಂಬ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಅತಿ ಶೀಘ್ರದಲ್ಲಿ ‘ಲವ್‌ಲೀ ಸ್ಟಾರ್’ ಪ್ರೇಮ್ ವೀರ ಯೋಧನ ಕಥೆ ಹೇಳೋದು ಕನ್ಫರ್ಮ್ ಆಗಿದೆ.
ನಾಡು ಕಂಡ ವೀರ ಯೋಧನ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳಲಿದ್ದು ಸುಮಾರು 400 ರಿಂದ 500 ಕೋಟಿ ರೂ. ವೆಚ್ಚದಲ್ಲಿ ಜನರಲ್ ಕಾರ್ಯಪ್ಪ ಸಿನಿಮಾ ಸೆಟ್ಟೇರಲಿದೆ. ಚಿತ್ರದ ಆರಂಭಕ್ಕೆ ಮುನ್ನ ಜನರಲ್ ಕಾರ್ಯಪ್ಪ ಫ್ಯಾಮಿಲಿಯನ್ನ ಮಡಿಕೇರಿಯಲ್ಲಿ ಭೇಟಿಯಾದ ಚಿತ್ರತಂಡ ಕಾರ್ಯಪ್ಪ ಕುಟುಂಬದಿಂದ ಕಥೆಗೆ ಒಪ್ಪಿಗೆ ಪಡೆದುಕೊಂಡಿದೆ.
‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ’ ಪುಣ್ಯಭೂಮಿಯಲ್ಲಿ ಪ್ರೇಮ್
ಸ್ಯಾಂಡಲ್ ವುಡ್ ನ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಅವರ ಸಿನಿಮಾ ಕೆರಿಯರ್ ನಲ್ಲಿ ಹೊಸ ಅಧ್ಯಾಯ ಎಂದೇ ಪರಿಗಣಿಸಬಹುದಾದ ಮತ್ತು ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಮಾರ್ಷಲ್ ಕಾರ್ಯಪ್ಪ ಅವರ ಜೀವನ ಆಧಾರಿತ ಕಥೆ ಹೊಂದಿರುವ ಸಿನಿಮಾಕ್ಕೆ ಸಕಲ ಸಿದ್ದತೆ ನಡೆಸಿದ್ದಾರೆ, ಕೊಡಗಿನ ಕನ್ನಡ ವೀರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುಣ್ಯ ಭೂಮಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಟ್ವಿಟರ್ ಖಾತೆ ಮೂಲಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಆಶೀರ್ವಾದ ಹೊಸ ಚಿತ್ರಕ್ಕೆ ಮತ್ತು ಚಿತ್ರ ತಂಡಕ್ಕೆ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ..!
ನಿನ್ನೆ ಕಾವೇರಮ್ಮನ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸಿದ ಬಳಿಕ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಸರ್ ಅವರ ಪುಣ್ಯಭೂಮಿಗೆ ಭೇಟಿ ನೀಡಿ ಅವರ ಪಾದಕ್ಕೆ ಹಣೆ ಹಚ್ಚಿ ಆಶೀರ್ವಾದ ಪಡೆಯುವ ಸಮಯದಲ್ಲಿ ಶುಭ ಸಂಕೇತವಾಗಿ ಜೋರು ಮಳೆ ಸುರಿದ ಆ ಕ್ಷಣವು ನಮ್ಮ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ಅವರು ಶುಭಹಾರೈಸಿದರು ಎಂದು ನಂಬಿದ್ದೀನಿ..