ಮಫ್ತಿ.. ಶಿವಣ್ಣನ ಹತ್ತಾರು ಇಂಡಸ್ಟ್ರಿ ಹಿಟ್ ಸಿನಿಮಾ ಪಟ್ಟಿಯಲ್ಲಿ ಮೊದಲ ಸಾಲಲ್ಲಿ ನಿಲ್ಲೋ ಸಿನಿಮಾ.. ಮಾಸ್ ಮಹಾರಾಜ ಶಿವಣ್ಣನ ಮಾಸಿಸಂನ ಮತ್ತಷ್ಟು ಹೆಚ್ವಿಸಿದ ಸಿನಿಮಾವಿದು.. ಇಂಟರ್ವಲ್ ಬರೋ ತನಕ ಶಿವಣ್ಣನ ಎಂಟ್ರಿ ಇಲ್ಲದಿದ್ರೂ, ಸೆಕೆಂಡ್ ಹಾಫ್ ಪೂರ್ತಿ ಶಿವೋಮಯ.. ರಾಕ್ಷಸನೂ ನೀನೆ.. ರಕ್ಷಕನೂ ನೀನೆ ಅಂತಾ ಸಿನಿಮಾ ಬರೋ ಸಾಹಿತ್ಯ ಶಿವಣ್ಣನ ಪಾತ್ರದ ವ್ಯಕ್ತಿತ್ವ ಪರಿಚಯಿಸುತ್ತೆ.. ಹೀಗಾಗಿ ‘ಭೈರತಿ ರಣಗಲ್’ ಮೇಲೆ ಪ್ರೇಕ್ಷಕರ ಮತ್ತು ಶಿವಣ್ಣನ ಅಭಿಮಾನಿಗಳ ದೃಷ್ಟಿ ನೆಟ್ಟಿತ್ತು.. ಇದೇ ಕಾರಣಕ್ಕೆ ಮಫ್ತಿ ಪ್ರೀಕ್ವೆಲ್ ಬರಲಿದೆ ಅನ್ನೋ ಸುದ್ದಿಯೂ ಹರಿದಾಡ್ತು.. ಶಿವಣ್ಣನ 125ನೇ ಸಿನಿಮಾ ಭೈರತಿ ರಣಗಲ್ ಆಗ್ಬೇಕಿತ್ತು.. ಆದ್ರೆ ಆ ಕನಸು ಈಡೇರಲಿಲ್ಲ..

ತಮ್ಮ ಚೊಚ್ವಲ ಸಿನಿಮಾದಲ್ಲೇ ನರ್ತನ್ ಜನ ಮೆಚ್ಚಿದ ನಿರ್ದೇಶಕ ಆಗಿಬಿಟ್ರು.. ಹೋದಲ್ಲಿ ಬಂದಲೆಲ್ಲಾ ಮಫ್ತಿ ಪ್ರೀಕ್ವೆಲ್ ಬಗ್ಗೆ ಪ್ರಶ್ನೆಗಳು ಎದುರಾಗ್ತಿತ್ತು.. ಇದ್ರ ನಡುವಲ್ಲೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗೆ ನರ್ತನ್ ನಿರ್ದೇಶನ ಮಾಡ್ತಾರೆ ಅನ್ನೋ ಸುದ್ದಿಯೂ ಹರಿದಾಡ್ತು.. ಅದು ವಾಸ್ತವವೂ ಹೌದು.. #yash19 ಸಿನಿಮಾಗಾಗಿ ನರ್ತನ್ ವರ್ಷಗಳ ಕಾಲ ಸ್ಕ್ರಿಪ್ಟಿಂಗ್ನಲ್ಲಿ ಕೂತಿದ್ರು.. ಇದರಿಂದ ಮಫ್ತಿ ಪ್ರೀಕ್ವೆಲ್ ಮುಂದೋಯ್ತು.. ಆದ್ರೀಗ ಮತ್ತೆ ಚಿತ್ರಣ ಬದಲಾಗಿದೆ ಬಹುನಿರೀಕ್ಷಿತ ‘ಭೈರತಿ ರಣಗಲ್’ ಸೆಟ್ಟೇರಲು ಸಜ್ಜಾಗಿದ್ದು, ಭರದ ತಯಾರಿ ನಡೀತಿದೆ..
ವೇದ ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ‘ರಣಗಲ್’ ಇತಿಹಾಸ ತೋರಿಸೋಕೆ ಹೊರಟಿದೆ.. ಫ್ಯಾನ್ಸ್ ಆಸೆಯಂತೆ ಮಫ್ತಿ ಮ್ಯಾಜಿಕಲ್ ಜೋಡಿ ಮತ್ತೆ ಒಂದಾಗ್ತಿದ್ದು, ಶಿವಣ್ಣನ ‘ರಣಾ’ವತಾರಕ್ಕೆ ಎದುರು ನೋಡ್ತಿದ್ದಾರೆ.. ಈ ಖುಷಿ, ಸಂಭ್ರಮದ ಮಧ್ಯೆ ಇಂಡಸ್ಟ್ರಿಯಲ್ಲಿ ಮತ್ತೊಂದು ಪ್ರಶ್ನೆ ಎದುರಾಗ್ತಿದೆ.. ನರ್ತನ್ ‘ಭೈರತಿ ರಣಗಲ್’ ಮಾಡೋಕೆ ಬಂದಾಯ್ತು.. ಹಾಗಿದ್ರೆ #yash19 ಕಥೆ ಏನಾಯ್ತು ಅನ್ನೋದು.. ಮೂಲಗಳ ಪ್ರಕಾರ ಯಶ್ ಮುಂದಿನ ಸಿನಿಮಾಗೆ ನರ್ತನ್ ನಿರ್ದೇಶನ ಮಾಡ್ತಿಲ್ಲ.. ಬದಲಾಗಿ ಯಶ್ ಮತ್ತೋರ್ವ ನಿರ್ದೇಶಕರೊಟ್ಟಿಗೆ ಕೆಲಸ ಮಾಡ್ತಿರೋ ಸುದ್ದಿ ಕೇಳಿ ಬರ್ತಿದೆ.. ಇತ್ತ ನರ್ತನ್ ಕಡೆಯಿಂದ ಯಶ್ ಅವ್ರಿಗೆ ಕಥೆಯಂತೂ ರೆಡಿಯಾಗಿದ್ದು, ಆ ಸಿನಿಮಾ ಯಾವಾಗ ಸೆಟ್ಟೇರಲಿದೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ.. ಈ ಪ್ರಶ್ನೆಗೆ ಖುದ್ದು ರಾಕಿ ಭಾಯ್ ಮತ್ತು ನರ್ತನ್ ಅವ್ರೇ ಉತ್ತರಿಸಬೇಕಿದೆ..