ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ..!

ಮೈಸೂರು ವಿಶ್ವವಿದ್ಯಾನಿಲಯ 102ನೇ ಘಟಿಕೋತ್ಸವ ನಡೆದಿದೆ…ಘಟಿಕೋತ್ಸವದಲ್ಲಿ ಪವರ್ ಸ್ಟಾರ್ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಲಾಯ್ತು…

ಕ್ರಾಫರ್ಡ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ‌ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು…ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. 

ನಟ ಪುನೀತ್ ರಾಜ್‍ಕುಮಾರ್ ಅವರ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು. ಈ ಸಂದರ್ಭದಲ್ಲಿ ಎಲ್ಇಡಿ ಸ್ಕ್ರೀನ್ ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿರುವ ಹಲವು ಚಿತ್ರಗಳ ತುಣುಕುಗಳನ್ನೂ ಪ್ರದರ್ಶಿಸಲಾಯಿತು…ವಿಶೇಷ ಎಂದರೆ 46 ವರ್ಷದ ಹಿಂದೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರಿಗೆ ಮೈಸೂರು ವಿವಿ‌ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತ್ತು…

ಡಾಕ್ಟರ್ ರಾಜ್ಕುಮಾರ್ ಕುಟುಂಬಕ್ಕೂ ಮೈಸೂರಿಗೂ ಅವಿನಾಭಾವ ಸಂಬಂಧ ..ರಾಜ್ ಕುಮಾರ್ ಅಭಿನಯದ ಬಹುತೇಕ ಸಿನಿಮಾಗಳ ಚಿತ್ರೀಕರಣ ಮೈಸೂರಿನಲ್ಲಿಯೇ ನಡೆದಿದ್ದು ರಾಜ್ ಕುಟುಂಬ ನಡೆಸುತ್ತಿರೋ ಶಕ್ತಿಧಾಮ ಆಶ್ರಮ ಕೂಡ ಮೈಸೂರಿನಲ್ಲಿಯೇ ಇದೆ…ಇನ್ನು ಪುನೀತ್ ರಾಜ್‍ಕುಮಾರ್ ಕೂಡ ಬಹುತೇಕ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆದಿದ್ದು ಪ್ರತಿ ಭಾರಿ ಮೈಸೂರಿಗೆ ಬಂದಾಗ ಅಪ್ಪು ಚಾಮುಂಡೇಶ್ವರಿ ದರ್ಶನ ಮಾಡದೇ ಬೆಂಗಳೂರಿಗೆ ವಾಪಸ್ ಆಗಿದ್ದೆ ಇಲ್ಲ ..ಪ್ರತಿ ಸಲವೂ ಮೆಟ್ಟಿಲು ಹತ್ತಿಕೊಂಡೇ ಹೋಗಿ ತಾಯಿ ದರ್ಶನ ಮಾಡುತ್ತಿದ್ದರು ಅಪ್ಪು….

Exit mobile version