ನಟಿ ಮೇಘನಾ ರಾಜ್ ಇದೇ ಮೊದಲಬಾರಿಗೆ …ಅಂದ್ರೆ ಮಗ ಹುಟ್ಟಿದ ನಂತ್ರ ಫಾರಿನ್ ಟ್ರಿಪ್ ಹೋಗಿದ್ದಾರೆ…ಸತತ ಮೂರು ವರ್ಷದಿಂದ ಮನೆಯಲ್ಲೇ ಇದ್ದ ಮೇಘನಾ, ಲಾಂಗ್ ಗ್ಯಾಪ್ ಆದ್ಮೆಲೆ ವಿದೇಶ ಪ್ರವಾಸ ಮಾಡ್ತಿದ್ದಾರೆ….ತಮ್ಮ ಗೆಳತಿಯರ ಜೊತೆ ಥೈಲ್ಯಾಂಡ್ ಸುತ್ತಾಡ್ತಿದ್ದಾರೆ ಮೇಘನಾ ರಾಜ್ ಸರ್ಜಾ…
2019 ರಲ್ಲಿ ಮದುವೆಯಾದ ಹೊಸತರಲ್ಲಿ ಚಿರು ಜೊತೆ ಯೂರೋಪ್ ಟ್ರಿಪ್ ಮಾಡಿದ್ರು ಮೇಘನಾ..ಆನಂತ್ರ ಮೇಘನಾ ಗರ್ಭಿಣಿಯಾದ್ರು… ಚಿರು ಅಗಲಿಕೆಯಿಂದಾಗಿ, ಮಗನ ಆಗಮನದಿಂದಾಗಿ ಮೂರು ವರ್ಷ ಎಲ್ಲಿಯೂ ಹೋಗದೆ ಮನೆಯಲ್ಲೇ ಇದ್ದರು…. ಕೆಲ ದಿನಗಳ ಹಿಂದೆ ಕಾರ್ಯಕ್ರಮಕ್ಕೆಂದು ಅಮೆರಿಕದ ಕ್ಯಾಲಿಫೋರ್ನಿಯಾಗೆ ಭೇಟಿ ನೀಡಿದ್ರು ಆಗ ಮಗ ರಾಯನ್ ಮತ್ತು ಚಿರು ಹೆಸರನ್ನ ಹಚ್ಚೆ ಹಾಕಿಸಿಕೊಂಡು ಎಲ್ಲರಿಗೂ ಸರ್ ಪ್ರೈಸ್ ನೀಡಿದ್ರು…. ಅದು ಖಾಸಗಿ ಪ್ರವಾಸವಾಗಿತ್ತು..
ಆದರೆ ಈಗ ಫ್ರೆಂಡ್ಸ್ ಜೊತೆ ಫಸ್ಟ್ ಟೈಂ ಟ್ರಿಪ್ ಹೋಗಿದ್ದಾರೆ….ಸದ್ಯ ಮೇಘನಾ ಇಂಡಸ್ಟ್ರಿಯಲ್ಲಿಯೂ ತಮ್ಮನ್ನ ತಾವು ತೊಡಗಿಸಿಕೊಳ್ತಿದ್ದಾರೆ ..ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ದಾರೆ…ಹಾಗಾಗಿ ಸಿನಿಮಾ ಶೂಟಿಂಗ್ ಸ್ಟಾರ್ಟ್ ಆಗುವ ಮುನ್ನ ಫಸ್ಟ್ ಟೈಂ ರಾಯನ್ ಬಿಟ್ಟು ಸಣ್ಣದೊಂದು ಪ್ರವಾಸಕ್ಕೆ ಹೋಗಿದ್ದಾರೆ…ಸದ್ಯ ಪ್ರವಾಸದ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ…