ಸಿನಿಮಾ CLIMAX ಅಲ್ಲಿ ಕೈ ಕೊಟ್ಟ ಹಿರೋಯಿನ್

ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜ್ಕುಮಾರ್ ಸಿನಿಮಾ ಅಂದರೆ ಇಂದಿಗೂ ಪ್ಯಾಮಿಲಿ ಆಡಿಯನ್ಸ್ ಮುಗಿಬಿದ್ದು ನೋಡುತ್ತಾರೆ ಅವರ ಚಲನಚಿತ್ರಗಳಲ್ಲಿ ಇದ್ದ ಸಂದೇಶ,ಅವರ ಸಹಜ ನಟನೆಗೆ ಮನಸೋಲದವರೇ ಇಲ್ಲ.ನಾವ್ಯಾರು ಕೃಷ್ಣ ದೇವರಾಯನನ್ನು ನೋಡಿಲ್ಲ ಆದರೆ ಅಣ್ಣಾವ್ರು ಅಭಿನಯಿಸಿದ ಶ್ರೀಕೃಷ್ಣ ದೇವರಾಯ ಸಿನಿಮಾ ನೋಡಿ ಕೃಷ್ಣದೇವರಾಯ ಹೀಗೆ ಇದ್ದನೋ ಏನೋ ಅಂದುಕೊಳ್ಳುತ್ತಿದ್ದೆವು ಅದೇ ರೀತಿ ಭಕ್ತ ಕನಕದಾಸರು,ಇಮ್ಮಡಿ ಪುಲಕೇಶಿ,ಭಕ್ತ ಕುಂಬಾರ,ಸತ್ಯ ಹರೀಶ್ಚಂದ್ರು ಹೀಗೆ ಸಾಲು ಸಾಲು ಸಿನಿಮಾಗಳಿಗೆ ಜೀವಕೊಟ್ಟಿದ್ದರು ರಾಜಕುಮಾರ್,ಇಂತಹ ಮೇರು ಪರ್ವತದ ಜೊತೆ ಅಭಿನಯಿಸಲು ಹಾತೊರೆಯುವ ಕಾಲ ಒಂದಿತ್ತು ಅಂತಹ ಕಾಲದಲ್ಲಿ ಆ ಹೀರೋಯಿನ್ ಅಣ್ಣಾವ್ರ ಬಹುನಿರೀಕ್ಷಿತ ಸಿನಿಮಾ ಒಂದರ ಕ್ಲೆöÊಮಾಕ್ಸ್ನಲ್ಲಿ ಅಣ್ಣಾವ್ರ ಮುಂದೆ ಕಾರು ಹತ್ತಿ ಅಲ್ಲಿಂದ ಹೋಗಿ ಬಿಟ್ಟಿದ್ದರು.

ಅದು ಜನವರಿ ೧ ೧೯೭೫ರಲ್ಲಿ ಟಿ.ಪಿ ವೇಣುಗೋಪಾಲ್ ನಿರ್ಮಾಣದ ವಿಜಯ್ ನಿರ್ದೇಶನದ ೩೫-೪೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅದ್ದೂರಿ ತಾರಾಂಗಣದ ಮಯೂರ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ,ಮಯೂರವರ್ಮನ ಮಾನ ಸ್ವಾಭಿಮಾನ ಗತ್ತು ಆ ಗಾಂಭರ‍್ಯವನ್ನ ನೋಡಿದ ಕನ್ನಡಿಗರು ರಾಜಕುಮಾರರಲ್ಲಿ ಮಯೂರವರ್ಮನನ್ನು ಕಂಡರು, ಅವರ ಅಭಿನಯಕ್ಕೆ ಉದೋ ಉದೋ ಎಂದರು,ಆಗಿನ ಕಾಲಕ್ಕೆ ಆ ಸಿನಿಮಾ ಸುಮಾರು ೩ ಕೋಟಿ ಗಳಿಸಿತು ಎಂದು ಹೇಳಲಾಗುತ್ತದೆ ಆದರೆ ಆ ಸಿನಿಮಾ ಬಗ್ಗೆ ಮಾತನಾಡುವಾಗ ನಮಗೆ ಮತ್ತೊಂದು ವಿಷಯ ನೆನಪಿಸಿಕೊಳ್ಳಲೇಬೇಕು ಅದೇನೆಂದರೆ ಮೈಸೂರು ಅರಮನೆಯಲ್ಲಿ ಚಿತ್ರೀಕರಣಗೊಂಡ ಮೊದಲ ಹಾಗು ಕಡೇಯ ಸಿನಿಮಾ ಮಯೂರ ಅದಾದ ನಂತರ ಮತ್ತೆ ಯಾವತ್ತು ಸಿನಿಮಾಗೋಸ್ಕರ ಮೈಸೂರು ಅರಮನೆಯನ್ನ ರಾಜರು ಯಾರಿಗು ಕೊಡಲೇ ಇಲ್ಲ.

ಇದನ್ನ ಹೊರತು ಪಡಿಸಿ ಮತ್ತೊಂದು ವಿಷಯ ನಿಮಗೆ ಹೇಳಲೇಬೇಕು ಅದೇನೆಂದರೆ ಮಯೂರ ಸಿನಿಮಾ ಕ್ಲೆöÊಮಾಕ್ಸ್ ಹಂತ ಸಾವಿರಾರು ಜನ ಕಲಾವಿದರನ್ನ ಹಾಕಿಕೊಂಡು ಚಿತ್ರೀಕರಣ ಮಾಡುತ್ತಿದ್ದ ತಂಡದ ಮಧ್ಯದಿಂದ ನಾಯಕನಟಿ ಮಂಜುಳ ಕಾರುಹತ್ತಿ ಹೊರಟೇ ಹೋಗುತ್ತಾರೆ ಅದು ಸಿನಿಮಾದ ಕೊನೇಯ ದೃಶ್ಯ ಅವರು ಯಾಕೆ ಹಾಗೆ ಹೋದರೆಂದು ಇವತ್ತಿಗು ಯಾರಿಗೂ ತಿಳಿದಿಲ್ಲ .

ಆದರೆ ನಿರ್ದೇಶಕರ ಸಮಯ ಪ್ರಜ್ಙೆಯಿಂದ ಅಂದಿನ ಕಾಲಕ್ಕೆ ಹಿರೋಯಿನ್ ಒಬ್ಬರಿಗೆ ಡ್ಯೂಪ್ ಹಾಕಿ ಕ್ಲೆöÊಮಾಕ್ಸ್ ಶೂಟ್ ಮಾಡಲಾಗುತ್ತದೆ ಹಾಗಾಗಿ ನೀವುಇಂದಿಗೂ ಮಯೂರ ಸಿನಿಮಾ ನೋಡಿದರೆ ನಿಮಗೆ ಹಿರೋಯಿನ್ ಪೇಸ್ ಕೊನೆಯಲ್ಲಿ ಕಾಣಸಿಗುವುದಿಲ್ಲ ಯಾಕಂದ್ರೆ ಅಲ್ಲಿ ಮಂಜುಳಾ ಬದಲು ಡ್ಯೂಪ್ ಬಳಸಲಾಗಿದೆ.

ಅವಿನಾಶ್

ಕನ್ನಡ ಪಿಚ್ಚರ್

Exit mobile version