ಆರ್.ವಿ.ಎಸ್ ಪ್ರೊಡಕ್ಷನ್ ಬ್ಯಾನರ್ ನಡಿ , ವಿ. ಶಿವರಾಂ ನಿರ್ಮಾಣದ, ಕೆ. ರಾಘವ್ ನಿರ್ದೇಶನದ ‘ಮರೆಯದೆ ಕ್ಷಮಿಸು ‘ ಸಿನಿಮಾ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಜನವರಿ 6ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಸದ್ಯ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರತಂಡ ಇದೀಗ ಪ್ರಾಮಿಸಿಂಗ್ ಟ್ರೇಲರ್ ಬಿಡುಗಡೆ ಮಾಡಿ ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಲು ರೆಡಿಯಾಗಿದ್ದಾರೆ.
ಮುದ್ದಾದ ಪ್ರೇಮ ಕಥೆ, ತಾಯಿಯ ಮಮತೆ, ಸ್ನೇಹಿತರ ಪ್ರೀತಿಯನ್ನ ಒಳಗೊಂಡ ಚಿತ್ರ ‘ಮರೆಯದೆ ಕ್ಷಮಿಸು ‘. ಕೆ. ರಾಘವ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರೈಸಿಂಗ್ ಪ್ರಮೋದ್ ಬೋಪಣ್ಣ , ಮೇಘನ ಗೌಡ ನಾಯಕ ನಾಯಕಿಯಾಗಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ರಮೇಶ್ ಭಟ್, ರಾಕ್ ಲೈನ್ ಸುಧಾಕರ್, ಅಪೂರ್ವ ಮಿಮಿಕ್ರಿ ಗೋಪಿ ನಟಿಸಿದ್ದಾರೆ. ಸೀರುಂಡೆ ರಘು, ರಾಯಲ್ ರವಿ, ಕಾರ್ತಿಕ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.
ರಿಷಿಕೇಶ್ ಛಾಯಾಗ್ರಹಣ , ಆರೋನ್ ಕಾರ್ತಿಕ್ ವೆಂಕಟೇಶ್, ಕ್ರಿಸ್ಟಾಫರ್ ಸಂಗೀತ, ಧನುಷ್ ಸಂಕಲನ ಈ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ಜನವರಿ 6ಕ್ಕೆ ಬಿಡುಗಡೆ ಯಾಗುತ್ತಿದೆ.