ಸುತ್ತಿಗೆಯಲ್ಲಿ ಚೆಚ್ಚೋ ಪೊಲೀಸ್‌ ಪಾತ್ರದಲ್ಲಿ ಪ್ರಜ್ವಲ್‌ ದೇವರಾಜ್‌

ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಪೊಲೀಸ್‌ ಸೂಪರ್‌ ಕಾಪ್‌ನಲ್ಲಿ ನಟಿಸ್ತಾ ಇರೋ, ಮತ್ತೊಂದು ಸಿನಿಮಾ ʻಮಾಫಿಯಾʼ ಫಸ್ಟ್‌ ಗ್ಲಿಂಪ್ಸಸ್‌ ಇಂದು ಗಣರಾಜ್ಯೋತ್ಸವದ ದಿನ ರಿಲೀಸ್‌ ಆಗಿದೆ. ರಗಡ್‌ ಲುಕ್‌ನ ಪೊಲೀಸ್‌ ಆಫೀಸರ್‌ ಕ್ರಿಮಿನಲ್‌ ಒಬ್ಬನನ್ನ ಸುತ್ತಿಗೆಯಲ್ಲಿ ಹೊಡೆಯುವ ಸೀನ್‌ ಚಿತ್ರದ ಸ್ಯಾಂಪಲ್‌ ಆಗಿ ರಿಲೀಶ್‌ ಆಗಿದೆ. ಹಾರರ್‌ ಥ್ರಿಲ್ಲರ್‌ ಸಿನಿಮಾಗಳಿಗೆ ಹೆಸರಾಗಿರೋ ನಿರ್ದೇಶಕ ಲೋಹಿತ್‌ ನಿರ್ದೇಶನದ ಸಿನಿಮಾ ʻಮಾಫಿಯಾʼದಲ್ಲಿ ಡೆವಿಲ್‌ ಲುಕ್‌ನಲ್ಲಿ ಪ್ರಜ್ವಲ್‌ ಅಬ್ಬರಿಸಿದ್ದಾರೆ.

ʻಮಾಫಿಯಾʼ ಚಿತ್ರಕ್ಕಾಗಿ ತಮ್ಮ ಲುಕ್‌ ಸಂಪೂರ್ಣವಾಗಿ ಬದಲಾಯಿಸಕೊಂಡಿದ್ದ ಪ್ರಜ್ವಲ್‌ ದೇವರಾಜ್‌, ಅವ್ರ ಈ ಟೀಸರ್‌ ನೋಡಿದ ಮೇಲೆ ಸಿನಿಮಾ ಕೂಡ ವಿಭಿನ್ನವಾಗಿರುತ್ತೆ ಅನ್ನೋದು ಗೊತ್ತಾಗುತ್ತೆ. ಲೋಹಿತ್‌ ನಿರ್ದೇಶನದ ಸಿನಿಮಾಕ್ಕೆ ಬೆಂಗಳೂರು ಕುಮಾರ್‌ ನಿರ್ಮಾಪಕರು, ಮಾಸ್ತಿ ಡೈಲಾಗ್ಸ್‌ ಬರೆದಿರೋ ಸಿನಿಮಾಕ್ಕೆ ಅನೂಪ್‌ ಸೀಳಿನ್‌ ಮ್ಯೂಸಿಕ್‌, ಅನಿಶ್‌ ತರುಣ್‌ ಕುಮಾರ್‌ ಕ್ಯಾಮರಾ ವರ್ಕ್‌ ಇದೆ.ಚಿತ್ರಕ್ಕೆ ಡಿಫರೆಂಟ್‌ ಡ್ಯಾನಿ ಸ್ಟಂಟ್‌ ಕಂಪೋಸ್‌ ಮಾಡಿದ್ದಾರೆ.

Exit mobile version