ಹೊಸ ʻಮಠʼ ರಿಲೀಸ್‌ ಮಾಡ್ಬೇಡಿ, ವಾಣಿಜ್ಯ ಮಂಡಳಿಗೆ ಕಂಪ್ಲೆಂಟ್..!

2006ರಲ್ಲಿ ಮಠ ಅನ್ನೋ ಸಿನಿಮಾ ರಿಲೀಸ್‌ ಆಗಿತ್ತು, ನವರಸ ನಾಯಕ ಜಗ್ಗೇಶ್‌ ಅಭಿನಯದ 100ನೇ ಸಿನಿಮಾ ಆಗಿದ್ದ ಈ ಮಠ ಸಿಕ್ಕಾಪಟ್ಟೆ ಕಾಂಟ್ರೋವರ್ಸಿ ಮಾಡಿಕೊಂಡಿತ್ತು. ಈಗ ಇದೇ ಟೈಟಲ್‌ ನಲ್ಲಿ ಬರ್ತಾ ಇರೋ ಸಿನಿಮಾ ಕೂಡ ಈ ವಿವಾದ ಸೃಷ್ಟಿಸಿಕೊಳ್ತಾ ಇದೆ. ಮಠ ಸಿನಿಮಾ ಬಿಡುಗಡೆಯನ್ನು ತಡೆಹಿಡಿಯಬೇಕು ಅಂತ ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ ಕರ್ನಾಟಕ ಫಿಲಂ ಚೇಂಬರ್ ಗೆ ಪತ್ರ ಬರೆದಿದ್ದಾರೆ.

ನ.18ಕ್ಕೆ ತೆರೆಗೆ ಬರೋಕೆ ರೆಡಿಯಾಗಿರೋ ಮಠ ಸಿನಿಮಾ ಟ್ರೇಲರ್ ನಲ್ಲಿ ಹಿಂದು ಮಠಗಳ ಬಗ್ಗೆ ಕೆಟ್ಟದಾಗಿ ತೋರಿಸಿದ್ದಾರೆ.. ಈ ಕುರಿತು ಚಿತ್ರತಂಡ ಸ್ಪಷ್ಟನೆ ಕೊಡ್ಬೇಕು, ಸ್ಪಷ್ಟನೆ ಕೊಡುವವರೆಗೆ ಬಿಡುಗಡೆಗೆ ತಡೆ ಕೊಡುವಂತೆ ಫಿಲಂ ಚೇಂಬರ್ ಅಧ್ಯಕ್ಷರಿಗೆ ಋಷಿಕುಮಾರ ಸ್ವಾಮೀಜಿ ಪತ್ರ ಬರೆದಿದ್ದಾರೆ. ರಮೇಶ್‌ ನಿರ್ಮಾಣದಲ್ಲಿ, ರವೀಂದ್ರ ವಂಶಿ ಆಕ್ಷನ್‌ ಕಟ್‌ ಹೇಳಿರೋ ಸಿನಿಮಾದಲ್ಲಿ ಮಠ ಗುರುಪ್ರಸಾದ್‌, ತಬ್ಲಾ ನಾಣಿ, ಸಾಧು ಕೋಕಿಲಾ, ಮಂಡ್ಯ ರಮೇಶ್‌ ಮುಂತಾದವರು ನಟಿಸಿದ್ದಾರೆ.

Exit mobile version