ದೀಪಾವಳಿಯಂದೇ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಜೊತೆ ಬಂದ ಅಜಯ್ ರಾವ್
ಸ್ಯಾಂಡಲ್ ವುಡ್ ನ ಕೃಷ್ಣ ಅಜಯ್ ರಾವ್ ದೀಪಾವಳಿ ಹಬ್ಬದಂದೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ…ವಿಭಿನ್ನ ಪಾತ್ರ ಹಾಗೂ ವಿಭಿನ್ನ ಸಬ್ಜೆಕ್ಟ್ ಮೂಲಕ ಪ್ರೇಕ್ಷಕರ ಮುಂದೆ ಬರೋ ಅಜಯ್ ರಾವ್ ಈ ಭಾರಿಯೂ ವೆರೈಟಿ ಆಗಿರೋ ಪಾತ್ರದ ಮೂಲಕವೇ ಎಂಟ್ರಿಕೊಡ್ತಿದ್ದಾರೆ….ಈ ಚಿತ್ರಕ್ಕೆ “ಬ್ಯಾಂಕ್ ಆಫ್ ಭಾಗ್ಯಲಕ್ಷಿ ಎಂದು ಹೆಸರಿಡಲಾಗಿದ್ದು ರಂಗಿತರಂಗ” ನಿರ್ಮಾಪಕ ಹೆಚ್ ಕೆ ಪ್ರಕಾಶ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ…
“ಬ್ಯಾಂಕ್ ಆಫ್ ಭಾಗ್ಯಲಕ್ಷಿ ಸಿನಿಮಾವನ್ನ ಅಭಿಷೇಕ್ ನಿರ್ದೇಶನ ಮಾಡುತ್ತಿದ್ದು ಸದ್ಯ ಹಬ್ಬದ ವಿಶೇಷವಾಗಿ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ…ಸಿಂಪಲ್ ಸುನಿ ಜೊತೆ ಕೆಲಸ ಮಾಡಿರೋ ಅಭಿಷೇಕ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದ್ದಾರೆ…ಸಿನಿಮಾ ಜೊತೆ ಜೊತೆಗೆ “ಪಿನಾಕ” ಎಂಬ ವಿ ಎಫ್ ಎಕ್ಸ್ ಸ್ಟುಡಿಯೋ ಹೊಂದಿರೋ ಅಭಿಷೇಕ್ ಈಗ ಪಕ್ಕಾ ಎಂಟರ್ಟೈನ್ಮೆಂಟ್ ಚಿತ್ರವನ್ನ ಪ್ರೇಕ್ಷಕರ ಮುಂದಿಡಲು ಸಿದ್ದರಾಗಿದ್ದಾರೆ…
ಬ್ಯಾಂಕ್ ದರೋಡೆ ಮಾಡಲು ಹೊರಟಿರುವವರ ಸುತ್ತ ಈ ಕಥೆ ಹೆಣೆಯಲಾಗಿದ್ದು ಜನವರಿಯಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ..ಹೆಚ್. ಕೆ ಪ್ರಕಾಶ್ ಅವರು ತಮ್ಮ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಐದನೇ ಚಿತ್ರವಿದು. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ತೇಜಸ್ ಆರ್ ಸಂಕಲನ ಹಾಗೂ ರಾಘು ಅವರ ಕಲಾ ನಿರ್ದೇಶನ ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಬಳಗದ ಮಾಹಿತಿ ಸದ್ಯದಲ್ಲೇ ತಿಳಿಸಲಿದ್ದಾರೆ “ಬ್ಯಾಂಕ್ ಆಫ್ ಭಾಗ್ಯಲಕ್ಷಿ” ಟೀಂ
ಪವಿತ್ರ.ಬಿ