ಚಂದನ್ – ಕವಿತಾ ಗೌಡ.. ಲಕ್ಷ್ಮಿ ಬಾರಮ್ಮ ಧಾರವಾಹಿಯಿಂದ ಮನೆ ಮಾತಾದ ಜೋಡಿ.. ಈ ಜೋಡಿ ಧಾರವಾಹಿ – ಸಿನಿಮಾದ ಆಚೆಗೂ ಅನ್ಯೋನ್ಯ ವಾಗಿದ್ರು. ನಾಲ್ಕೈದು ವರ್ಷಗಳಿಂದ ಇಬ್ಬರೂ ಪ್ರೀತಿಯಲ್ಲಿದ್ದಾರೆ ಅಂತಾ ಆಗಿಂದಾಗೆ ಕೇಳಿ ಬರ್ತಿತ್ತು.. ಆದ್ರೆ ಅವರು ಎಂದೂ ಹೇಳಿಕೊಂಡಿರಲಿಲ್ಲ.. ಆದ್ರೆ ಥಟ್ ಅಂತಾ ನಿಶ್ಚಿತಾರ್ಥ ಅನೌನ್ಸ್ ಮಾಡಿ.. ನಾವು ಮದುವೆ ಆಗ್ತಿದ್ದೀವಿ ಅಂತಾ ತಿಳಿಸಿದ್ರು..
ಆದ್ರೆ ಮದುವೆ ಯಾವಾಗ ಆಗಲಿದ್ದಾರೆ ಅನ್ನೋದನ್ನು ತಿಳಿಸಿರಲಿಲ್ಲ.. ಇದೀಗ ಫೋಟೋ ಮೂಲಕವೇ ತಮ್ಮ ವಿವಾಹದ ಸುದ್ದಿಯನ್ನು ಚಂದನ್ – ಕವಿತಾ ಹಂಚಿಕೊಂಡಿದ್ದಾರೆ.. ಚಂದನ್ ನಿವಾಸದಲ್ಲಿ ಸಿಂಪಲ್ಲಾಗಿ ಮದುವೆ ಸಂಭ್ರಮ ನಡೆದಿದೆ. ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ರು.