ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾದ ಫ್ಯಾಮಿಲಿ ಸ್ಟಾರ್ ಅಭಿಜಿತ್

ಕಳೆದ ಮೂರು ದಶಕಗಳಿಂದ ಕನ್ನಡ ಸಿನಿಮಾರಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಅಭಿಜಿತ್‌ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗ್ತಿದ್ದಾರೆ…ಸ್ಮಾಲ್‌ ಸ್ಕ್ರೀನ್‌ ನಲ್ಲಿ ಜಾದು ಮಾಡ್ತಿರೋ ಅಭಿಜಿತ್ ಈಗ ಅಟ್ಲಿ ಚಿತ್ರದಲ್ಲಿ ವಿಶೇಷ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ…

ಅಭಿಜಿತ್ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ತೊಂಭತ್ತರ ದಶಕದಲ್ಲಿ ಶೃತಿ ಹಾಗೂ ಅಭಿಜಿತ ಜೋಡಿ ಎಲ್ಲರ ಗಮನ ಸೆಳೆದಿತ್ತು.. ಈಗ ಹಲವು ವರ್ಷಗಳ ನಂತರ ಶೃತಿ ಹಾಗೂ ಅಭಿಜಿತ್‌ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ…

ಆರ್ ಜಿ ವಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ರಂಗನಾಥ್ ಆರ್ ನಿರ್ದೇಶನದ “ಅಟ್ಲಿ” ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.ಕಾಸರಗೋಡಿನ ಸುತ್ತಮುತ್ತ “ಅಟ್ಲಿ” ಕಥೆ ನಡೆಯಲಿದ್ದು ನಿರ್ದೇಶಕ ರಂಗನಾಥ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ “ಅರಿವು”, “ಪ್ರಭುತ್ವ” ಚಿತ್ರಗಳನ್ನು ನಿರ್ದೇಶಿಸಿದ್ದರು ರಂಗನಾಥ್
ಪೂಜಾ ಜನಾರ್ದನ್ ನಾಯಕಿಯಾಗಿ ನಟಿಸುತ್ತಿದ್ದು ಕೆ.ಜಿ.ಎಫ್ ಅನ್ ಮೋಲ್, ಶೃತಿ, ಅಭಿಜಿತ್, ಅತುಲ್ ಕುಲಕರ್ಣಿ, ರವಿಕಾಳೆ, ನಾಜರ್, ಸುಪ್ರೀತ್, ಮನು ಮಯೂರ, ಲಲಿತಾ “ಅಟ್ಲಿ” ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರದ ಮೂರು ಹಾಡುಗಳನ್ನ ಯೋಗರಾಜ್ ಭಟ್, ಡಾ|ವಿ.ನಾಗೇಂದ್ರಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದು. ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಯ್ ಮೂರ್ತಿ ಸಂಭಾಷಣೆ ಬರೆದಿದ್ದಾರೆ..

Exit mobile version