ರಿಯಲ್ ಸ್ಟಾರ್ ಉಪೇಂದ್ರ ಕಿಚ್ಚ ಸುದೀಪ್ ಅಭಿನಯದ ಕಬ್ಜ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ… ಟೀಸರ್ ಹಾಗೂ ಸಾಂಗ್ ಗಳ ಮೂಲಕ ಬಾರಿ ಸದ್ದು ಮಾಡಿರುವಂತಹ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ಅಲ್ಲಿ ರಿಲೀಸ್ ಆಗಲಿದೆ…ಸದ್ಯ ಕಬ್ಜ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಿದೆ…
ಫೆಬ್ರವರಿ 26ರಂದು ಸಿನಿಮಾದ ಆಡಿಯೋ ಲಾಂಚ್ ಮಾಡಲು ನಿರ್ದೇಶಕ ಚಂದ್ರು ನಿರ್ಧಾರ ಮಾಡಿದ್ದು… ಶಿಡ್ಲಘಟ್ಟದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಡಿಯೋ ಲಾಂಚ್ ನಡೆಯಲಿದೆ.. ಆಡಿಯೋ ಲಾಂಚ್ಗೆ ಕನ್ನಡ ತಮಿಳು ತೆಲುಗು ಹಾಗೂ ಬಾಲಿವುಡ್ ನ ಸ್ಟಾರ್ ಗಳು ಬರೆದಿದ್ದಾರೆ..
ಚಿತ್ರದಲ್ಲಿ ಶ್ರೀಯಾ ಶರಣ್ ನಾಯಕಿ ಆಗಿ ಮಿಂಚಿದ್ದು ಸಿನಿಮಾದ ಮೇಕಿಂಗ್ ಹಾಗೂ ಕಂಟೆಂಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ.. ಈಗಾಗಲೇ ಚಿತ್ರೀಕರಣ ಮುಗಿಸಿದ್ದು ಸಿನಿಮಾ ತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ… ಮಾರ್ಚ್ 17 ಅಪ್ಪು ಹುಟ್ಟು ಹಬ್ಬದ ವಿಶೇಷವಾಗಿ ಕಬ್ಜ ಸಿನಿಮಾ ರಿಲೀಸ್ ಆಗಲಿದೆ….