ಜೂ. ಎನ್.ಟಿ.ಆರ್ ರಿಂದ ಕನ್ನಡದಲ್ಲಿ ಕೊರೊನಾ ಜಾಗೃತಿ‌..!!!

ಇಡೀ ದೇಶ ಕೊರೊನಾ ಸೋಂಕಿನ‌ ಸಂಕಷ್ಟದಲ್ಲಿ ಸಿಲುಕಿದೆ. ಈ ಸಂದರ್ಭದಲ್ಲಿ ಚಿತ್ರೋದ್ಯಮದ ಹಲವಾರು ಕಲಾವಿದ್ರು ಈ ಮಹಾಮಾರಿಯಿಂದ ಹುಷಾರಾಗಿರುವುದು ಹೇಗೆ ಅನ್ನೋ ಜಾಗೃತಿಯನ್ನ ಮೂಡಿಸುತ್ತಿದ್ದಾರೆ. ಅದ್ರಂತೆ ದೇಶದ ಅತಿದೊಡ್ಡ ಸಿನಿಮಾಗಳಲ್ಲಿ ಒಂದಾದ ರಿಲೀಸ್ಗೆ ರೆಡಿಯಾಗಿರೋ‌, ರಾಜಮೌಳಿ‌ ನಿರ್ದೇಶನದ ಬಹು ತಾರಾಗಣದ RRR ಸಿನಿಮಾ ತಂಡ ದೇಶದ ಐದು ಭಾಷೆಯಲ್ಲಿ, ಒಬ್ಬೊಬ್ಬರು ಒಂದೊಂದು ಭಾಷೆಯಲ್ಲಿ ಕರೋನಾ ವಿರುದ್ಧ ಹೋರಾಡುವ ಸ್ಫೂರ್ತಿದಾಯಕ ಮಾತುಗಳನ್ನ ಹೇಳಿದ್ದಾರೆ. ಎನ್.ಟಿ.ಆರ್ , ರಾಮ್ ಚರಣ್ ತೇಜಾ, ಅಲಿಯಾ ಭಟ್, ಅಜಯ್ ದೇವ್ಗನ್ ಹಾಗೂ ರಾಜಮೌಳಿ ಮಾತನಾಡಿರೋ ಈ ವಿಡಿಯೋ ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಈ ವಿಡಿಯೋದಲ್ಲಿ ಜ್ಯೂ.ಎನ್‌ ಟಿ ಆರ್‌ ಕನ್ನಡದಲ್ಲಿ,ಕನ್ನಡಿಗರಿಗೆ ಜಾಗೃತಿ ವಹಿಸುವಂತೆ ಕನ್ನಡದಲ್ಲಿ ಮನವಿ ಮಾಡಿದ್ದಾರೆ.

Exit mobile version