ಪುನೀತ್ ಅಭಿಮಾನಿಗಳಿಗೆ ʻಜೇಮ್ಸ್ʼ ತಂಡದಿಂದ ಗುಡ್ ನ್ಯೂಸ್

ಜೇಮ್ಸ್‌ ಹಬ್ಬ ಶುರು.. ಫೆಬ್ರವರಿ11ಕ್ಕೆ ಸಿನಿಮಾದ ಟೀಸರ್ ಲಾಂಚ್ ಮಾಡಲು ಪ್ಲಾನ್..!

ಪುನೀತ್ ಅಭಿನಯದ “ಜೇಮ್ಸ್ ” ಚಿತ್ರ ತಂಡದಿಂದ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ ..ಇತ್ತೀಚಿಗಷ್ಟೆ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಕುತೂಹಲ ಹುಟ್ಟುಹಾಕಿದ ನಿರ್ದೇಶಕ ಚೇತನ್ ಈಗ ಚಿತ್ರದ ಟೀಸರ್ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ …

ಫೆಬ್ರವರಿ11ಕ್ಕೆ ಜೇಮ್ಸ್ ಚಿತ್ರದ ಟೀಸರ್ ಲಾಂಚ್ ಮಾಡಲು ಪ್ಲಾನ್ ಮಾಡಲಾಗಿದ್ದು…ಟೀಸರ್ ಲಾಂಚ್ ಕಾರ್ಯಕ್ರಮ ಕೂಡ ತುಂಬ ವಿಶೇಷ ರೀತಿಯಲ್ಲಿ ಇರಲಿದೆಯಂತೆ …ಸಿನಿಮಾವನ್ನ ಮಾರ್ಚ್ 17 ರಂದು ತೆರೆಗೆ ತರಲು ನಿರ್ಧಾರ ಮಾಡಿದ್ದು ಇದು ಪುನೀತ್ ಅಭಿನಯದ ಕೊನೆಯ ಚಿತ್ರವಾಗಲಿದೆ..

ಸಿನಿಮಾದ ಆಡಿಯೋ ರೈಟ್ಸ್ ಪಿಅರ್ ಕೆ ಪಾಲಾಗಿದ್ದು  ಪಿಅರ್ ಕೆ ಆಡಿಯೋ ಯೂಟ್ಯೂಟ್ ಚಾನಲ್ ನಲ್ಲೆ “ಜೇಮ್ಸ್” ಟೀಸರ್ ಲಾಂಚ್ ಅಗಲಿದೆ …ಅಪ್ಪು ಸಮಾಧಿ ಬಳಿ “ಜೇಮ್ಸ್” ಟೀಸರ್ ಅನ್ನು ಗ್ರಾಂಡ್ ಆಗಿ ರಿಸೀವ್ ಮಾಡಲು ಅಪ್ಪು ಫ್ಯಾನ್ಸ್ ತಯಾರಿ ಮಾಡಿದ್ದಾರೆ ..

Exit mobile version