ಫೈಟರ್ ವಿವೇಕ್ ಸಾವಿನ ನಂತರ ಎಚ್ಚೆತ್ತ ಕನ್ನಡ ಚಿತ್ರ ರಂಗ : ಹೊಸ ನಿಯಮಾವಳಿ ಜಾರಿ

ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ‘ಲವ್ ಯ್ಯೂ ರಚ್ಚು’ ಶೂಟಿಂಗ್ ವೇಳೆ ನಡೆದ ದುರ್ಘಟನೆಯಿಂದಾಗಿ ಫೈಟರ್ ವಿವೇಕ್ ಎಂಬ ಯುವಕನ ಸಾವು ಸಂಭವಿಸಿತ್ತು ಇದರಿಂದ ಎಚ್ಚೆತ್ತ ಕರ್ನಾಟಕ  ಚಲನಚಿತ್ರ ವಾಣಿಜ್ಯ ಮಂಡಳಿ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಫೈಟರ್ ಗಳಿಗೆ ಇನ್ಶೂರೆನ್ಸ್ ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಕೇವಲ ಫೈಟರ್ ಗಳು ಮಾತ್ರವಲ್ಲದೆ, ಚಿತ್ರರಂಗದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರಿಗೂ ವಿಮೆ ಮಾಡುವುದು ಕಡ್ಡಾಯ.

‘ಲವ್ ಯ್ಯೂ ರಚ್ಚು’ ಶೂಟಿಂಗ್ ವೇಳೆ ಸಾವನಪ್ಪಿದ ಫೈಟರ್ ವಿವೇಕ್
‘ಲವ್ ಯ್ಯೂ ರಚ್ಚು’ ಶೂಟಿಂಗ್ ವೇಳೆ ಸಾವನಪ್ಪಿದ ಫೈಟರ್ ವಿವೇಕ್

ಇನ್ಶೂರೆನ್ಸ್ ಹೊಂದಿರುವ ಕಾರ್ಮಿಕರಿಗೆ, ತಂತ್ರಜ್ಞರಿಗೆ  ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬೇಕು ಎಂದು ವಾಣಿಜ್ಯ ಮಂಡಳಿ, ನಿರ್ಮಾಪಕರಿಗೆ ಸೂಚನೆ ನೀಡಿದೆ. ಚಿತ್ರೀಕರಣಕ್ಕೂ ಮೊದಲು ಕೆಲಸ ಮಾಡುವ ಯಾವುದೇ ಕಾರ್ಮಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿರುವುದಾಗಿ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕು ಎಂಬ ಹೊಸ ನಿಯಮ ಜಾರಿಗೊಳಿಸಲಾಗಿದೆ.


ಮಾಸ್ತಿಗುಡಿ ಚಿತ್ರೀಕರಣ ವೇಳೆ  ನಡೆದ ದಿರ್ಘಟನೆಯಲ್ಲಿ ಸಾವನಪ್ಪಿದ ಉದಯ್ ಮತ್ತು ಅನೀಲ್

ಈ ಹಿಂದೆ ಮಾಸ್ತಿಗುಡಿ ಚಿತ್ರೀಕರಣ ವೇಳೆ  ನಡೆದ ದಿರ್ಘಟನೆಯಲ್ಲಿ ಉದಯ್ ಮತ್ತು ಅನೀಲ್ ಎಂಬ ಕಲಾವಿದರು ಸಾವನಪ್ಪಿದ್ದರು, ಆಗಲೂ ಇದೇ ರೀತಿಯ ಚರ್ಚೆಗಳು ನಡೆದಿದ್ದವು, ಒಟ್ಟಾರೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಚಿತ್ರತಂಡದ ಜವಬ್ದಾರಿಯಾಗಿದೆ.

****

Exit mobile version