ಜೋಕಾಲಿ , ರಾಜಹಂಸ ಸಿನಿಮಾ ಮೂಲಕ ಗಮನ ಸೆಳೆದಿದ್ದ ಗೌರಿಶಂಕರ್ ಈಗ ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದತೆ ಮಾಡಿಕೊಳ್ತಿದ್ದಾರೆ…..ಗೌರಿಶಂಕರ್ ಅಭಿನಯದ ಹೊಸ ಸಿನಿಮಾ ಇಂದು ಸೆಟ್ಟೇರಿದ್ದು ಚಿತ್ರಕ್ಕೆ ಕೆರೆಬೇಟೆ ಎಂದು ಹೆಸರಿಡಲಾಗಿದೆ…ಈ ಚಿತ್ರದ ಮುಹೂರ್ತ ಇಂದು ಹೊಗೆವಡ್ಡಿ ಹಾಲುರಾಮೇಶ್ವರ ದೇವಸ್ಥಾನದಲ್ಲಿ ನೆರವೇರಿದೆ. ಕೆರೆಬೇಟೆ ಮೂಲಕ ಹಳ್ಳಿ ಸೊಗಡಿನ ನೈಜತೆಯೊಂದಿಗೆ ಮೂಡಿ ಬರುತ್ತಿರುವ ಪ್ರೇಮ ಕಥೆಯನ್ನ ತೆರೆ ಮೇಲೆ ತರೋ ಪ್ರಯತ್ನ ಮಾಡ್ತಿದ್ದಾರೆ ನಿರ್ದೇಶಕ ಗುರುಶಿವ ಹಿತೈಶಿ….
ಕಳೆದ 10 ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಪವನ್ ಒಡೆಯರ್ ಹಾಗೂ ಇತರೆ ನಿರ್ದೇಶಕರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಗುರುಶಿವ ಹಿತೈಶಿ ರವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು
ಮಲೆನಾಡ ಭಾಗದ ಕೆರೆಬೇಟೆ ಅನ್ನೋ ಸಂಸ್ಕೃತಿಯನ್ನು ಚಿತ್ರದ ಒಂದು ಮೂಖ್ಯ ಭಾಗವಾಗಿ ಅಳವಡಿಸಿಕೊಳ್ಳಲಾಗಿದೆ. ಅದಕ್ಕಾಗಿ ಇದೇ ಟೈಟಲ್ ಅನ್ನು ಫಿಕ್ಸ್ ಮಾಡಿಕೊಂಡಿದ್ದಾರೆ ನಿರ್ದೇಶಕರು….ಗಗನ್ ಬಡೇರಿಯಾ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ…
ಚಿತ್ರದಲ್ಲಿ ಗೌರಿಶಂಕರ್ ನಾಯಕನಾಗಿ ಅಭಿನಯ ಮಾಡುತ್ತಿದ್ದು ಬಿಂದು ಶಿವರಾಮ್ (ನಾಯಕಿ ಹೊಸ ಪಂಚಯ), ಗೋಪಾಲ್ ದೇಶ್ ಪಾಂಡೆ, ಸಂಪತ್, ಹರಿಣಿ, ರಘುರಾಜನಂದ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್ ಹಾಗೂ ಮಲೆನಾಡು ಭಾಗದ ತಂತ್ರಜ್ಞಾನ ಮತ್ತು ಕಲಾವಿದರು ಚಿತ್ರದಲ್ಲಿ ಇರಲಿದ್ದಾರೆ …ಸಿನಿಮಾದ ಮೊದಲ ಹಂತದ ಚಿತ್ರಿಕರಣವನ್ನು ಇದೇ ತಿಂಗಳ 10 ರಿಂದ ಸಿಗಂಧೂರು, ಕೋಗಾ ಘಾಟ್ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಂತೆ…ಸದ್ಯ ಮಹೂರ್ತ ಮುಗಿಸಿರೋ ಟೀಂ ಇಂದಿನಿಂದಲೇ ಶೂಟಿಂಗ್ ಆರಂಭಿಸಿದೆ…..