ನಾಳೆಯಿಂದಲೇ ಶೇ.100 ಥಿಯೇಟರ್ ಭರ್ತಿಗೆ ಸರ್ಕಾರದ ಅನುಮತಿ..!
ಕೊರೊನಾ ಮೂರನೇ ಆಲೆ ಶುರುವಾದ ನಂತ್ರ ಶೇ.50ರಷ್ಟು ಥಿಯೇಟರ್ ಭರ್ತಿಗೆ ಸರ್ಕಾರ ಸೂಚನೆಯನ್ನು ನೀಡಿತ್ತು, ಇದರಿಂಧಾಗಿ ಸಾಕಷ್ಟು ಸಿನಿಮಾಗಳ ರಿಲೀಸ್ ಮುಂದಕ್ಕೆ ಹೋಗಿತ್ತು. ಸದ್ಯ ಎಲ್ಲಾ ಉದ್ಯಮಗಳಿಗೂ ರಿಲೀಫ್ ನೀಡಿದ್ದ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.100 ಪ್ರದರ್ಶನಕ್ಕೆ ಅನುಮತಿ ನೀಡಿರಲಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗದ ಗಣ್ಯರ ಮನವಿಗೆ ಸ್ಪಂದಿಸಿರೋ ಸರ್ಕಾರ ಇದೇ ಶನಿವಾರ ಅಂದ್ರೆ ನಾಳೆಯಿಂದಲೇ ಥಿಯೇಟರ್ನಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.
ಥಿಯೇಟರ್ಗೆ 100% ಸೀಟು ಭರ್ತಿಗೆ ಅವಕಾಶ ನೀಡಿರುವ ಸರ್ಕಾರ ಕೋವಿಡ್ ನಿಯಮಗಳನ್ನ ಪಾಲಿಸುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದ್ದು, ಇದರ ಪಾಲನೆಗಾಗಿ ಥಿಯೇಟರ್ ಸಿಬ್ಬಂದಿ ಕೂಡ ಸಹಕರಿಸಬೇಕು ಎಂದಿದೆ. ಈ ಆದೇಶಕ್ಕಾಗಿ ಕಾಯ್ತಾ ಇದ್ದ ಸಿನಿಮಾಗಳು ಹಾಗು ಚಿತ್ರೋದ್ಯಮದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳು ಹಾಗೂ ಕೆಲವು ಹೊಸಬರ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಎಂದಿನಂತೆ ಗಾಂಧಿನಗರ ರಂಗೇರಲಿದೆ.