ಭತ್ತದ ರಾಶಿ‌ಮೇಲೆ ‘ರಾಜಕುಮಾರ’ನನ್ನಿಟ್ಟು ನಮಿಸಿದ ರೈತ..!

ಡಿಸೆಂಬರ್, ಜನವರಿ ಬಂತೆಂದರೆ ಅನ್ನಧಾತ ತಾನು ಬೆಳೆದ ಪೈರನ್ನು ಕುಯ್ಲು ಮಾಡಿ, ಕಣದಲ್ಲಿ ಒಕ್ಕಣೆ ಮುಗಿಸಿ, ರಾಶಿಯನ್ನು ಪೂಜಿಸಿ ಮನೆಗೆ ಪಸಲನ್ನು ತಂದಿಡುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಹೀಗೆ ದೇಶಕ್ಕೆ ಅನ್ನ ಕೊಡುವ ಅನ್ನಧಾತ ರೈತನನ್ನು ಇಡೀ ದೇಶವೇ ಪೂಜಿಸುತ್ತದೆ. ಮತ್ತು ಪೂಜಿಸುಬೇಕು ಕೂಡ.

YouTube player

ಇಲ್ಲೊಬ್ಬ ರೈತ ತಾನು ಬೆಳೆದ ಭತ್ತವನ್ನು ಕಣದಲ್ಲಿ ಒಕ್ಕಣೆಮಾಡಿ, ಒಪ್ಪ ಮಾಡಿದ ಭತ್ತದ ರಾಶಿಗೆ ಪೂಜೆ ಮಾಡುವ ವೇಳೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಫೋಟೋ ಇಟ್ಟು ಪೂಜೆ ಮಾಡಿದ್ದಾನೆ. ತಾನು ಬೆಳೆದ ಅನ್ನಕ್ಕೆ ಕೊಡುವ ಗೌರವವನ್ನೆ ಪುನೀತ್ ರಾಜಕುಮಾರ್ ಅವರಿಗೂ ನೀಡಿರುವುದು, ಪುನೀತ್ ರಾಜಕುಮಾರ್ ಮೇಲಿನ ಅಭಿಮಾನ  ಗೌರವ ಎಂತದ್ದು ಎಂದು ತಿಳಿಯುತ್ತದೆ.

****

Exit mobile version