ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಆದ ಪಾತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನ ಹೊಂದಿರುವ ನಾಯಕ ನಟ ಡಾಲಿ ಧನಂಜಯ್….ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವಂತಹ ಜೀವಂತಿಕೆ ಇರುವ ನಟ ಧನಂಜಯ್ ಸದ್ಯ ಡಾಲಿ ಅಭಿನಯದ ಹೊಯ್ಸಳ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿ ತೆರಿಗೆ ಬರಲು ಸಿದ್ಧವಾಗಿದೆ… ಮಾರ್ಚ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು…… ಧನಂಜಯ್ ಹೈದ್ರಾಬಾದ್ ನಲ್ಲಿ ತೆಲುಗು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ….
ಈ ಮಧ್ಯ ಧನಂಜಯ್ ಬಗ್ಗೆ ಸುದ್ದಿ ಒಂದು ಜೋರಾಗಿ ಹರಿದಾಡುತ್ತಿದೆ….ಕರಲವು ವರ್ಷಗಳ ಹಿಂದೆ ಧನಂಜಯ್ ಇಮ್ಮಡಿ ಪುಲಿಕೇಶಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲು ಇಷ್ಟ ಎಂದು ತಮ್ಮ ಅಭಿಪ್ರಾಯನ ವ್ಯಕ್ತಪಡಿಸಿದ್ದರು… ಆದರೆ ಈಗ ಅಭಿಮಾನಿಗಳು ಧನಂಜಯ್ ಅವರನ್ನ ಹಿಮ್ಮಡಿ ಪುಲಕೇಶಿಯ ಪಾತ್ರದಲ್ಲಿ ನೋಡಲು ಇಷ್ಟ ಪಡುತ್ತಿದ್ದಾರೆ….
ಸದ್ಯಕ್ಕೆ ಫ್ಯಾನ್ಸ್ ಧನಂಜಯ್ ಇಮ್ಮಡಿ ಪುಲಿಕೇಶಿಯಾಗಿ ಕಾಣಿಸಿಕೊಳ್ಳಲಿ ಆ ಸಿನಿಮಾವನ್ನ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದ್ರೆ ಚೆನ್ನಾಗಿರುತ್ತೆ…ಅದೊಂದು ಅದ್ಭುತವಾದ ಐತಿಹಾಸಿಕ ಸಿನಿಮಾ ಆಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ… ಅದಷ್ಟೇ ಅಲ್ಲದೆ ಇಮ್ಮಡಿ ಪುಲಿಕೇಶಿ ಪಾತ್ರದಲ್ಲಿ ಡಾಲಿ ಯಾವ ರೀತಿ ಕಾಣುತ್ತಾರೆ ಎಂದು ಫೋಟೋವನ್ನು ಕೂಡ ಎಡಿಟ್ ಮಾಡಿ ವೈರಲ್ ಮಾಡುತ್ತಿದ್ದಾರೆ.. ಡಾಲಿ ಧನಂಜಯ್ ಕೇವಲ ನಟನಾಗಿ ಮಾತ್ರವಲ್ಲದೆ ಉತ್ತಮ ಬರಹಗಾರರು ಕೂಡ ಆಗಿದ್ದಾರೆ… ಹಾಗಾಗಿ ಧನಂಜಯ್ ಅವರೇ ಕಥೆಯನ್ನೂ ಬರೆದರೆ ಇನ್ನು ಅದ್ಭುತ ಎಂಬುವುದು ಫ್ಯಾನ್ಸ್ ಗಳ ಅಭಿಪ್ರಾಯ….