ದುನಿಯಾ ವಿಜಯ್ ಹೊಸ ಗೆಟಪ್..! ಬಾಲಯ್ಯ ಸಿನಿಮಾ ಲುಕ್ಕಾ ಇದು?

ಸ್ಯಾಂಡಲ್ ವುಡ್ ನ ದುನಿಯಾ ವಿಜಯ್ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ‘ಸಲಗ’ ಯಶಸ್ಸಿನ ನಂತರ ಮತ್ತೆ ಹಳೆಯ ಚಾರ್ಮ್ ಗೆ ಮರಳಿದ್ದಾರೆ ವಿಜಯ್. ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದ ವಿಜಯ್ ಇಂಡಸ್ಟ್ರಿಗೆ ಕಂಬ್ಯಾಕ್ ಆಗಲು ಒಂದು ದೊಡ್ಡ ಸಕ್ಸಸ್ಗಾಗಿ ಕಾಯುತ್ತಿದ್ದರು ಆ ಯಶಸ್ಸನ್ನು ತಂದುಕೊಟ್ಟಿದೆ ಸಲಗ ಚಿತ್ರ.

ಈಗ ನಟ ದುನಿಯಾ ವಿಜಯ್ ಅವರು ತೆಲುಗು ಸಿನಿಮಾವೊಂದಕ್ಕೆ ವಿಲನ್ ಆಗಿ ನಟಿಸಲು ಆಫರ್ ಬಂದಿದ್ದು, ಚಿತ್ರದಲ್ಲಿ ತೆಲುಗು ಲೆಜೆಂಡ್ ಬಾಲಯ್ಯ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ವಿಲನ್ ಆಗಿ ನಟಿಸುತ್ತಿದ್ದಾರೆ ದುನಿಯಾ ವಿಜಯ್. ಸಲಗದ ಕ್ರೇಜ್ ತೆಲುಗು ಇಂಡಸ್ಟ್ರಿಯವರನ್ನು ಸೆಳೆಯಲು ಯಶಸ್ವಿಯಾಗಿದೆ. ಹಾಗಾಗಿ ನಟ ವಿಜಿ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್  ಪೇಜ್ ಖಾತೆಯಲ್ಲಿ  ನ್ಯೂ ಲುಕ್ ನ ಫೋಟೋ ಶೇರ್ ಮಾಡಿರುವ ದುನಿಯಾ ವಿಜಯ್ “ಶಾಂತ ಮನಸ್ಸು ನಿಮ್ಮ ಯುದ್ಧಗಳ ವಿರುದ್ಧದ ಅಂತಿಮ ಅಸ್ತ್ರವಾಗಿದೆ’ (A Calm Mind is the Ultimate Weapon against your Battles) ಎಂದು ಬರೆದು ಪೋಸ್ಟ್ ಮಾಡಿದ್ದಾರೆ.ದುನಿಯಾ ವಿಜಯ್ ಇತ್ತೀಚೆಗೆ ತಮ್ಮ ತಾಯಿ ಮತ್ತು ತಂದೆಯನ್ನು ಕಳೆದುಕೊಂಡ ಕೊರಗಿನಲ್ಲಿದ್ರು, ಸದ್ಯ ಆ ದುಃಖದಿಂದ ಹೊರಗೆ ಬಂದಿರುವ ವಿಜಯ್ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ, ಈ ಪೋಸ್ಟ್ ಗೆ ವಿಜಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದು ತಮ್ಮ ನೆಚ್ಚಿನ ನಟನ್ನು ಇತರೆ ಭಾಷೆಗಳ ಚಿತ್ರದಲ್ಲಿ ನೋಡಲು ಕಾತರರಾಗಿದ್ದಾರೆ.

****

Exit mobile version