ಮಾಸ್‌ ಪ್ರೇಕ್ಷಕರ ಹಾಟ್‌ ಫೇವರೇಟ್‌ ನಿರ್ದೇಶಕ ಸುಕ್ಕ ಸೂರಿ…!

ಕನ್ನಡ ಸಿನಿಮಾರಂಗದ ಮಾಸ್‌ , ಕಲ್ಟ್‌ ಸಿನಿಮಾ ಅಂತ ಬಂದ್ರೆ ಮೊದಲಿಗೆ ನೆನಪಾಗೋದು ಸುಕ್ಕ ಸೂರಿ…ನಮ್ಮ ನೆಲದ ದೇಸಿ ಸ್ಟೈಲ್‌ ಕಥೆಯನ್ನ ರಾ ಸ್ಟೈಲ್‌ ನಲ್ಲಿ ಪ್ರಸೆಂಟ್‌ ಮಾಡೋ ನಿರ್ದೇಶಕ…ತನ್ನದೇ ಸ್ಟೈಲ್‌ ಆಫ್‌ ಮೇಕಿಂಗ್‌ ಜೊತೆಯಯಲ್ಲಿ ಚಿತ್ರ ವಿಚಿತ್ರ ಪಾತ್ರಗಳನ್ನ ಪ್ರೇಕ್ಷಕರ ಮುಂದಿಡುತ್ತಾ ಇಂದಿಗೂ ಗೆಲ್ಲುತ್ತಾ ಎಲ್ಲರಿಗೂ ಸಲ್ಲುತ್ತಾ ಮುನ್ನಡೆಯುತ್ತಿದ್ದಾರೆ….

ಸದ್ಯ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ನಲ್ಲಿ ಬ್ಯುಸಿ ಆಗಿರೋ ದುನಿಯಾ ಸೂರಿ ಇನ್ನು ಕೆಲವೇ ದಿನಗಳಲ್ಲಿ ಯಂಗ್‌ ರೆಬೆಲ್‌ ಸ್ಟಾರ್‌ ಜೊತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ…ತನ್ನ ತನಕ್ಕೆ ಯಾವುದೇ ಪ್ರಚಾರವಿಲ್ಲದೆ ಬಿಲ್ಡಪ್‌ ಇಲ್ಲದೇ ತಾನಾಯ್ತು ತನ್ನ ಕೆಲಸವಾಯ್ತು ಅಂತ ಇರೋ ದುನಿಯಾ ಸೂರಿ ನಿರ್ದೇಶನದ ಸಿನಿಮಾ ಅಂದ್ರೆ ಪ್ರೇಕ್ಷಕರು ಮಗಿಬಿದ್ದು ನೋಡುತ್ತಾರೆ…

ದುನಿಯಾ ಸೂರಿ ಪ್ರಸೆಂಟ್‌ ಮಾಡಿರೋ ಕಾಲ್ಪನಿಕ ಪಾತ್ರಗಳ ಹೆಸರು ಸದ್ಯ ಅವ್ರ ಬರ್ತಡೇ ಸ್ಪೆಷಲ್‌ ಆಗಿ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗ್ತಿದೆ…
ಶಿವು, ಜಾಕಿ, ಕಡ್ಡಿಪುಡಿ, ಸುಬ್ಬಿ, ಲೂಸ್ ಮಾದ, ಸತ್ಯಣ್ಣ, ಪೆಟ್ರೋಲ್,ಜಂಗ್ಲಿ ಪ್ರಭಾಕರ, ಗುಡ್ಡೆ ನರಸಿಂಹ, ಜಾನಕಿ ರಾಮ, ಪರಂಗಿ ಸೀನ, ಮಿಠಾಯಿ ರಾಮ,ಬಾಂಡ್ ರವಿ, ಚಪಾತಿ ಬಾಬು, ಚಾರ್ಲಿ,ಆನಂದ, ರೆಕ್ಕೆ ವೆಂಕಟೇಶ, ಔಷಧಿ ಮೋಹನ, ಜಿಂಕೆ, ಗಾಲಿ,ಬಜ್ಜಿ ಸತೀಶ, ಟಗರು ಶಿವ, ಡಾಲಿ, ಚಿಟ್ಟೆ, ಕಾಕ್ರೋಚ್, ಅಂಕಲ್, ಕಾನ್ಸ್ಟೇಬಲ್ ಸರೋಜ, ಜಾಮೂನ್ ರವಿ, ಕಾಟನ್ ಪೇಟೆ ಮಂಜ, ಕಾಟ, ಜಿಯಾ, ಆಮ್ಲೆಟ್, ತರ್ಕಾರಿ ಕಲೀಲ್, ಬೇಬಿ ಬಾಸ್, ಮಂಕಿ ಸೀನ,ಗಲೀಜು , ಕೋತ್ಮಿರಿ …ಕಪ್ಪೆ …ಹಾವ್ರಾಣಿ … ಭದ್ರಾವತಿ ಕುಷ್ಕಾ… ಶಿವಮೊಗ್ಗ ಬಿರಿಯಾನಿ… ಮೂಗಾ… ಶುಗರ್ ,‍ ವಾಶ್ ರೂಮ್, ಪಾಪ್ ಕಾರ್ನ್ ವಾಸನೇ ಬಾಬು, ಹೀಗೆ ಸೂರಿ ಸೃಷ್ಟಿ ಮಾಡಿರೋ ಪಾತ್ರಗಳು ಒಂದಲ್ಲ ಎರಡಲ್ಲ…ಈ ಪಾತ್ರಗಳು ಕೇವಲ ಸಿನಿಮಾಗೆ ಮಾತ್ರ ಸೀಮಿತವಾಗಿರದೇ ಇಂದಿಗೂ ಈ ಪಾತ್ರ ನಿರ್ವಹಿಸಿದ ಕಲಾವಿದರು ಚಿತ್ರರಂಗದಲ್ಲಿ ತಮ್ಮದೇ ಆದ ದಾರಿ ಕಂಡುಕೊಂಡಿದ್ದಾರೆ….

Exit mobile version